ADVERTISEMENT

ಲಾರಿ ಹರಿದು ವಿದ್ಯಾರ್ಥಿನಿ ಸಾವು

ನೈಸ್‌ ರಸ್ತೆಯಲ್ಲಿ ಬೈಕ್‌ ಅಪಘಾತ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಶನಿವಾರ ರಾತ್ರಿ ಲಾರಿಯೊಂದು ಹರಿದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಂಕಿತಾ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ದೆಹಲಿಯ ಅಂಕಿತಾ ಇಂಟರ್ನ್‌ಶಿಪ್‌ಗಾಗಿ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಆಕೆ ಜತೆಗೆ ಇನ್ನೂ ಮೂವರು ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡುತ್ತಿದ್ದರು.

ವಾರಾಂತ್ಯದಲ್ಲಿ ನಾಲ್ವರು ಸೇರಿ ಮಾರತ್ತಹಳ್ಳಿಯಿಂದ ಕನಕಪುರದ ಪ್ರವಾಸಿ ತಾಣವೊಂದಕ್ಕೆ ಹೊರಟಿದ್ದರು. ಸ್ನೇಹಿತ ಪಂಜಾಬ್‌ನ ಅನುಭವ್‌ (22) ಅವರ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನ ಹಿಂಬದಿಯಲ್ಲಿ ಅಂಕಿತಾ ಕುಳಿತಿದ್ದರು’ ಎಂದು ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸರು ತಿಳಿಸಿದರು.

ADVERTISEMENT

ತಲಘಟ್ಟಪುರ ಠಾಣೆ ಸಮೀಪ ನೈಸ್‌ ರಸ್ತೆ ಜಂಕ್ಷನ್‌ನಲ್ಲಿ ರಾತ್ರಿ 12.30 ಗಂಟೆ ಸುಮಾರಿಗೆ ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಗುದ್ದಿತ್ತು. ಆಗ ಸವಾರರಿಬ್ಬರೂ ಕೆಳಗೆ ಬಿದ್ದಿದ್ದರು. ಅಂಕಿತಾ ಮೈ ಮೇಲೆಯೇ ಲಾರಿಯ ಚಕ್ರಗಳು ಹರಿದುಹೋಗಿದ್ದವು. ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಅನುಭವ್‌ ಅವರಿಗೂ ಗಾಯಗಳಾಗಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.