ADVERTISEMENT

ಲ್ಯಾಪ್ ಟಾಪ್ ಕೊಟ್ಟ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ಪ್ರಯಾಣಿಕರೊಬ್ಬರು ಆಟೊದಲ್ಲಿ ಬಿಟ್ಟು ಹೋಗಿದ್ದ ಅರವತ್ತೈದು ಸಾವಿರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಅನ್ನು ಹಿಂದಿರುಗಿಸುವ ಮೂಲಕ ಚಾಲಕ ಫಝುಲ್ಲಾಖಾನ್ ಎಂಬುವರು ಮಾದರಿ ಕೆಲಸ ಮಾಡಿದ್ದಾರೆ.

ಆರ್.ಟಿ. ನಗರದ ಮಠದಹಳ್ಳಿ ನಿವಾಸಿಯಾದ ಫಝುಲ್ಲಾ ಅವರು ಜ.13ರಂದು ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯೂ ಬಿಇಎಲ್ ರಸ್ತೆಯಲ್ಲಿ ಆಟೊ ಹತ್ತಿಕೊಂಡ ಸಂಶೋಧನಾ ವಿದ್ಯಾರ್ಥಿ ನಿರ್ಮಲ್ಯ ಬಸು ಎಂಬುವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಳಿದುಕೊಂಡಿದ್ದಾರೆ.

ಆದರೆ ಅವರು ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಪೆನ್‌ಡ್ರೈವ್ ಇದ್ದ ಕೈಚೀಲವನ್ನು ಆಟೊದಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

`ವಾಹನದಲ್ಲಿದ್ದ ಲ್ಯಾಪ್‌ಟಾಪ್ ಮತ್ತಿತರ ವಸ್ತುಗಳಿದ್ದ ಕೈ ಚೀಲವನ್ನು ಫಝುಲ್ಲಾಖಾನ್ ಕಚೇರಿಗೆ ತಂದು ಒಪ್ಪಿಸಿದರು. ಆನಂತರ ಅದರ ಮಾಲೀಕರನ್ನು ಹುಡುಕಿ ಅವರಿಗೆ ಮಾಹಿತಿ ನೀಡಲಾಯಿತು.ಕಚೇರಿಗೆ ಬಂದ ನಿರ್ಮಲ್ಯ ಅವರಿಗೆ ವಸ್ತುಗಳನ್ನು ಹಿಂದಿರುಗಿಸಲಾಯಿತು.

ADVERTISEMENT

ಪ್ರಾಮಾಣಿಕತೆ ಮೆರೆದು ಮಾದರಿ ಕೆಲಸ ಮಾಡಿದ ಆಟೊ ಚಾಲಕನಿಗೆ ಪ್ರಶಂಸನಾ ಪತ್ರ ಮತ್ತು ಎರಡು ಸಾವಿರ ನಗದು ಬಹುಮಾನ ನೀಡಲಾಯಿತು~ ಎಂದು ಉತ್ತರ ವಿಭಾಗದ ಡಿಸಿಪಿ ಎಚ್.ಎಸ್. ರೇವಣ್ಣ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.