ಬೆಂಗಳೂರು: `ಕಾನೂನಿನ ಮುಂದೆ ಎಲ್ಲರೂ ಒಂದೇ. ವಕೀಲರಿಗೇನು ಪ್ರತ್ಯೇಕ ಸಂವಿಧಾನವಿಲ್ಲ. ಹೀಗಾಗಿ ತಮ್ಮಿಂದ ಆಗಿರುವ ತಪ್ಪನ್ನು ವಕೀಲರು ಒಪ್ಪಿಕೊಳ್ಳಬೇಕು~ ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.
ನಗರದಲ್ಲಿ ಗುರುವಾರ ಭಾರತ ಜನ ಜಾಗೃತಿ ಸೇನೆ ಆಯೋಜಿಸಿದ್ದ ಮಾನವೀಯ ಮೌಲ್ಯಗಳ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ ಮಾತನಾಡಿ, `ಪ್ರತಿಭಟನೆಯ ಹೆಸರಿನಲ್ಲಿ ವಕೀಲರು ರಾಕ್ಷಸೀ ಪ್ರವೃತ್ತಿಯ ಪ್ರದರ್ಶನ ಮಾಡಿದ್ದಾರೆ ~ ಎಂದರು.
ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಸೇರಿದಂತೆ ಹಲವರಿಗೆ `ಕರ್ನಾಟಕ ಸೌಜನ್ಯ ರತ್ನ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಸಂಘಟನೆಯ ಎಸ್.ಸಿ.ಎಂ.ಭೈರೇಗೌಡ, ಸಿ. ಮುನಿಯಪ್ಪ, ಎನ್.ರವಿಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.