ಬೆಂಗಳೂರು: ‘ವರ್ಬಾಟಲ್–2016’ ಬೆಂಗಳೂರು ವಲಯದ ಸ್ಪರ್ಧೆಗಳಲ್ಲಿ ಹಿರಿಯರ ವಿಭಾಗದಿಂದ 17 ಶಾಲಾ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಸ್ಪರ್ಧೆಗಳು ಆರಂಭಗೊಂಡಿದ್ದು, ಶುಕ್ರವಾರದ ವರೆಗೆ ಮುಂದುವರಿಯಲಿವೆ. ವರ್ಬಾಟಲ್ ಕನ್ನಡ, ಕಿರಿಯರು ಹಾಗೂ ಹಿರಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು.
ಹಿರಿಯರ ವಿಭಾಗದಲ್ಲಿ 160 ತಂಡಗಳು ಪಾಲ್ಗೊಂಡಿದ್ದವು. ಗುರುವಾರವೂ ಹಿರಿಯರ ವಿಭಾಗದ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತ ತಂಡಗಳು ಪಾಲ್ಗೊಳ್ಳಲು ಅವಕಾಶ ಇದೆ. ಕಿರಿಯರ ವಿಭಾಗದಲ್ಲಿ 120 ತಂಡ ಗಳು ಭಾಗವಹಿಸಿದ್ದು, 38 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿವೆ. ಕನ್ನಡ ವಿಭಾಗದ ಸ್ಪರ್ಧೆ ಶುಕ್ರವಾರ ನಡೆಯಲಿದೆ.
‘ಸಂವಹನ ಕೌಶಲಕ್ಕೆ ಆದ್ಯತೆ’: ‘ವಿದ್ಯಾರ್ಥಿಗಳು ವಾದ ಮಂಡಿಸುವ ಕೌಶಲ ಹಾಗೂ ಪ್ರತಿಸ್ಪರ್ಧಿಗಳ ವಾದವನ್ನು ಹಿಮ್ಮೆಟ್ಟಿಸುವ ಸಂವಹನ ಕೌಶಲಗಳಿಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದು ಚರ್ಚಾ ಸ್ಪರ್ಧೆಗಿಂತ ವಾದ–ಪ್ರತಿವಾದ ಮಂಡನೆಯ ಸ್ಪರ್ಧೆಯಾಗಿದೆ’ ಎಂದು ವರ್ಬಾಟಲ್ ಸಂಸ್ಥೆಯ ಮುಖ್ಯಸ್ಥ ದೀಪಕ್ ತಿಮ್ಮಯ ಹೇಳಿದರು.
‘ವಿದ್ಯಾರ್ಥಿಗಳು ವಿಷಯಾಂತರ ಮಾಡಬಾರದು. ನೀಡಿರುವ ವಾಕ್ಯದ ಮೇಲೆ ಸಮರ್ಥವಾದ ವಾದ ಮಂಡನೆ ಮಾಡಬೇಕು. ಪ್ರತಿಸ್ಪರ್ಧಿಗಳ ಮಾತನ್ನು ಅರ್ಥೈಸಿಕೊಂಡು, ಅದಕ್ಕೆ ಸಮರ್ಥವಾದ ಪ್ರತಿವಾದವನ್ನು ಮಂಡಿಸಬೇಕು’ ಎಂದು ಸಲಹೆ ನೀಡಿದರು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದವರು: ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನ ಅತುಲ್ ಲಕ್ಷ್ಮಣ್– ಸಾಯ್ ಶಕ್ತಿ, ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ಪಲ್ಲವಿ ಆರ್. ಭಟ್– ಸುಭಾಷ್ ಹೊಳ್ಳ, ಇಷಿತಾ ಸಿಂಗ್– ಅಪೂರ್ವ ವಿ., ದಿಲ್ಲಿ ಪಬ್ಲಿಕ್ ಶಾಲೆಯ (ಪೂರ್ವ) ತರುಷ್ ಅವಸ್ತಿ– ಅನುಷ್ ಕುಮಿಕಾರ್, ದಿಲ್ಲಿ ಪಬ್ಲಿಕ್ ಶಾಲೆಯ (ಉತ್ತರ) ಅರ್ಷಿ ರಾಯ್– ಅಮೃತಾ ಅಲಪಟ್ಟಿ, ಅಭಿನವ್ ಬಿ– ತೀರ್ಥಂಕ ಚಟರ್ಜಿ, ಜೈನ್ ಕಾಲೇಜಿನ ಕ್ರೇಶನು ಕೌಲ್– ಕರಣ್ ಅಗರ್‌ವಾಲ್, ಸತ್ಯದೀಪ ಸಾರಂಗಿ– ಪಾರ್ವತಿ ಕಬ್ಬೂರು, ಕೆನ್‌ಶ್ರೀ ಕಾಲೇಜಿನ ಅಶು ತೋಷ್–ರಾಘವೇಂದ್ರ, ನಾಗಾರ್ಜುನ ವಿದ್ಯಾನಿ ಕೇತನ ಶಾಲೆಯ ಐಸಾಕ್ ಜಾನ್– ಹರಿಣಿ ಎಂ.ಎಸ್.
ಪಿಇಎಸ್ ವಿಶ್ವವಿದ್ಯಾಲಯದ ಸಾಯ್ ಪ್ರಸನ್ನ– ವೆಂಕಟವರ್ದನ್ ವಿ.ವಿ, ರಾಯಲ್ ಕಾನ್‌ಕಾರ್ಡ್ ಅಂತರ ರಾಷ್ಟ್ರೀಯ ಶಾಲೆಯ ಅನಿಕೇತ್ ದಾಸ್– ಗೌರವ್, ಜೈದ್–ರಿತಿಕ್ ಜಾರ್ಜ್ ಚೆರಿ ಯನ್, ಅಧಿರ ರಾಜೇಶ್ ಮೆನನ್– ರಿಯಾ ಸಾರಾ ಪಾಲ್, ಆಕಾಂಕ್ಷಾ ಜಿ. ಪ್ರಭು– ರಕ್ಷಿತ್ ಸಚ್‌ದೇವ್, ವಾಣಿ ವಿದ್ಯಾ ಕೇಂದ್ರ ಪದವಿಪೂರ್ವ ಕಾಲೇಜಿನ ಶ್ರೀ ಗಣೇಶ್ ಎಸ್.ಎಸ್– ಅನನ್ಯಾ ಎಂ. ರಾವ್, ವಿದ್ಯಾಶಿಲ್ಪ್ ಅಕಾಡೆಮಿಯ ಜೊಯೆಲ್ ಜೆಬಾ– ಭಾನುಶ್ರೀ ಶ್ರೀಧರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.