ADVERTISEMENT

ವಸುಮತಿ ಉಡುಪ ವರ್ಷದ ಲೇಖಕಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:28 IST
Last Updated 6 ಸೆಪ್ಟೆಂಬರ್ 2019, 19:28 IST
ವಸುಮತಿ ಉಡುಪ
ವಸುಮತಿ ಉಡುಪ   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ‘ವರ್ಷದ ಲೇಖಕಿ–ಅಂಕಿತ ಪುಸ್ತಕ ಪುರಸ್ಕಾರ’ಕ್ಕೆ ಲೇಖಕಿ ವಸುಮತಿ ಉಡುಪ ಆಯ್ಕೆಯಾಗಿದ್ದಾರೆ.

ವಸುಮತಿ ಉಡುಪ ಅವರ 21 ಕಥಾ ಸಂಕಲನಗಳು ಈವರೆಗೆ ಪ್ರಕಟವಾಗಿವೆ.ಅಂಕಿತ ಪುಸ್ತಕ ಪ್ರಕಾಶನವುಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿಯನ್ನು ಸ್ಥಾಪಿಸಿದ್ದು,ಈ ಪ್ರಶಸ್ತಿ ₹ 35 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ.

ಸಂಘವು ಭಾನುವಾರ (ಸೆ.8) ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಕವಿ ಪ್ರೊ. ದೊಡ್ಡರಂಗೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.