ADVERTISEMENT

ವಾಣಿಜ್ಯ ಮಳಿಗೆ ನಿರ್ಮಾಣ ಸಂಸ್ಥೆಗೆ ಬಿಬಿಎಂಪಿ ದಂಡ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಬೆಂಗಳೂರು: ನಗರದ ಸೋಫಿಯಾ ಶಾಲೆ ಸಮೀಪ ವಾಣಿಜ್ಯ ಮಳಿಗೆ ನಿರ್ಮಿಸುತ್ತಿರುವ ಮೆ. ನ್ಯೂ ಕನ್ಸಾಲಿಡೇಟೆಡ್ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಬಿಬಿಎಂಪಿ ಸೋಮವಾರ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ನಿರ್ಮಾಣ ಹಂತದಲ್ಲಿರುವ ಬೃಹತ್ ವಾಣಿಜ್ಯ ಮಳಿಗೆ ಸ್ಥಳದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದರಿಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅನಾರೋಗ್ಯಪೀಡಿತರಾಗಿರುವ ಬಗ್ಗೆ ಪೋಷಕರು ನೀಡಿದ ದೂರಿನನ್ವಯ ಪಾಲಿಕೆಯ ಉಪ ಆರೋಗ್ಯಾಧಿಕಾರಿ ಡಾ.ಜಿ.ಕೆ. ಸುರೇಶ್ ಹಾಗೂ ಆರೋಗ್ಯಾಧಿಕಾರಿ (ಪೂರ್ವ) ಡಾ.ಎಸ್.ಬಿ. ನಾಗರಾಜ್ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಿವೆ. ಸೋಫಿಯಾ ಶಾಲಾ ಆವರಣದಲ್ಲಿನ ಮರಳಿನ ಬಕೆಟ್ ಹಾಗೂ ಬಿಸಾಡಿರುವ ಬಣ್ಣದ ಡಬ್ಬಗಳು, ಹೂಕುಂಡಗಳು ಹಾಗೂ ನಿಂತ ನೀರಿನ ತಾಣಗಳಲ್ಲಿಯೂ ಸೊಳ್ಳೆಗಳು ಉತ್ಪತ್ತಿಯಾಗಿರುವುದು ಕಂಡು ಬಂದಿದೆ.

ಈ ಸಂಬಂಧ ಶಾಲಾ ಮುಖ್ಯೋಪಾಧ್ಯಾಯರ ಗಮನಸೆಳೆದು ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಔಷಧಿ ಸಿಂಪಡಿಸುವಂತೆ ಕೋರಲಾಯಿತು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.