ADVERTISEMENT

ವಿಜೃಂಭಣೆಯ ಮದ್ದೂರಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 20:45 IST
Last Updated 20 ಏಪ್ರಿಲ್ 2011, 20:45 IST
ವಿಜೃಂಭಣೆಯ ಮದ್ದೂರಮ್ಮ ದೇವಿ ರಥೋತ್ಸವ
ವಿಜೃಂಭಣೆಯ ಮದ್ದೂರಮ್ಮ ದೇವಿ ರಥೋತ್ಸವ   

ಮಹದೇವಪುರ: ಕ್ಷೇತ್ರದ ವರ್ತೂರು ಸಮೀಪದ ಮಧುರಾನಗರದಲ್ಲಿನ ಶ್ರೀಮದ್ದೂರಮ್ಮ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮೊದಲಿಗೆ ದೇವಾಲಯದಲ್ಲಿ ಕಳಶಾರ್ಚನೆ, ಯಾಗಶಾಲಾ ಪ್ರವೇಶ, ಶ್ರೀಗಣ ಹೋಮ, ವಾಸ್ತುಹೋಮ, ನವಗ್ರಹ ಮತ್ತು ದುರ್ಗಾಹೋಮ ಕಾರ್ಯಕ್ರಮಗಳು ನಡೆದವು.
ನಂತರ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾಮಹೋತ್ಸವ ಕ್ರಮವಾಗಿ ಎರಡು ದಿನಗಳ ಕಾಲ ನಡೆದವು. ಹೊಸಕೋಟೆ, ಮಹದೇವಪುರ ಹಾಗೂ ಆನೇಕಲ್ ಕ್ಷೇತ್ರದ ವಿವಿಧ ಊರುಗಳಿಂದ ಸಾವಿರಾರು ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಎರಡು ದಿನಗಳ ಕಾಲ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ನಡೆದ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಹುಲಿವೇಶ ಕುಣಿತ, ತಮಟೆ ವಾದ್ಯ, ಗಾರುಡಿ ಗೊಂಬೆಗಾರ, ಕೀಲು ಕುದುರೆ ನೃತ್ಯ, ಮರಗಾಲು ಕುಣಿತ ಕಾರ್ಯಕ್ರಮಗಳು ಭಕ್ತಾದಿಗಳ ಗಮನ ಸೆಳೆದವು.

ಅಲ್ಲದೆ ವರ್ತೂರು ಗ್ರಾಮದ ವೇಣು ಕುಟುಂಬದ ಸದಸ್ಯರಿಂದ ಪಂಡರಿ ಭಜನೆ ಹಾಗೂ ರಾಮಗೊಂಡನಹಳ್ಳಿಯ ಕರಾಟೆಪಟು ಮಂಜು ಮತ್ತು ತಂಡದವರಿಂದ ಇಂಡೋ, ಜಪಾನ್ ಮತ್ತು ಇಂಡೋ ಏಷ್ಯನ್ ಕರಾಟೆ ಸಾಹಸ ಪ್ರದರ್ಶನ ನಡೆಯಿತು.

ಈ ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವರ್ತೂರು ಆರ್.ಪ್ರಕಾಶ, ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್, ಉತ್ಸವದ ಅಧ್ಯಕ್ಷ ಎಂ.ಸಿ.ಸಿ ರವಿ, ಮುನಿಸ್ವಾಮಿರೆಡ್ಡಿ, ಆರ್.ರಾಮಕೃಷ್ಣಪ್ಪ, ಎನ್.ಎ.ನಾರಾಯಣಸ್ವಾಮಿ ರಾಮಗೊಂಡನಹಳ್ಳಿ, ಪಿ.ಸುಬ್ಬಣ್ಣ, ವಿ.ಸತೀಶ, ಚಂದ್ರಾ ರೆಡ್ಡಿ ಸೇರಿದಂತೆ ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.ಮಗಾರಿಗೆ ಬೆಂಗಳೂರು ಪೂರ್ವ ತಾಲೂಕು ಪಂಚಾಯಿತಿ ಸದಸ್ಯ ಎಂ.ಶ್ರೀನಿವಾಸರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು. ಎಸ್.ಉದಯಕುಮಾರ್, ಸಮಾಜ ಸೇವಕ ಡಾ.ಲಕ್ಷ್ಮಣ ರೆಡ್ಡಿ, ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ಎಂ.ಸಿ.ಸಿ.ರವಿ, ಪಿ.ಸುಬ್ಬಣ್ಣ ಹಾಗೂ ಹರೀಶಕುಮಾರ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.