ADVERTISEMENT

ವಿದ್ಯುತ್‌ ಖರೀದಿ ಅವ್ಯವಹಾರ ಡಿಕೆಶಿ– ಎಚ್‌ಡಿಕೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:25 IST
Last Updated 27 ಅಕ್ಟೋಬರ್ 2017, 20:25 IST

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ವಿದ್ಯುತ್‌ ಖರೀದಿ ಅವ್ಯವಹಾರ ಕುರಿತು ಪರಿಶೀಲಿಸುತ್ತಿರುವ ಸದನ ಸಮಿತಿ‌ ಅಧ್ಯಕ್ಷ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಶುಕ್ರವಾರ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದರು.

ಸದನ ಸಮಿತಿಯ ಸದಸ್ಯ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೂ ಅದು ಅಂಗೀಕಾರ ಆಗಿರಲಿಲ್ಲ. ಸಮಿತಿಯ ಕೊನೆ ಸಭೆ ಇದೇ 30ರಂದು ನಡೆಯಲಿದೆ. ಈ ಸಭೆಯಲ್ಲಿ ಸಮಿತಿ ವರದಿ ಅಂತಿಮಗೊಳ್ಳಲಿದೆ. ಸದಸ್ಯರಾಗಿ ಮುಂದುವರಿದಿರುವುದರಿಂದ ವರದಿಗೆ ಕುಮಾರಸ್ವಾಮಿ ಸಹಿಯೂ ಅಗತ್ಯವಾಗಿದೆ.

ವರದಿಯ ಕರಡು ಪ್ರತಿ ಬಗ್ಗೆ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ ಶಿವಕುಮಾರ್‌, ಅಂತಿಮ ಸಭೆಯಲ್ಲಿ ಭಾಗವಹಿಸುವಂತೆ, ವರದಿಗೆ ಸಹಿ ಹಾಕುವಂತೆ ಮನವಿ ಮಾಡಿದರು. ಅದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದರು. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಮಿತಿ ವರದಿ ಮಂಡನೆ ಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.