ADVERTISEMENT

ವಿಧಾನಸೌಧದಲ್ಲಿ ಹಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ವಿಧಾನಸೌಧದ 2ನೇ ಮಹಡಿಯ 214(ಎ) ಕೊಠಡಿ ಯಲ್ಲಿ ಶನಿವಾರ ಮಧ್ಯಾಹ್ನ ಕೇರೆ ಹಾವು ಕಾಣಿಸಿಕೊಂಡ ಕಾರಣ  ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನ 2.15ರ ಸುಮಾರಿಗೆ ವಿಧಾನ ಪರಿಷತ್ತಿನ ದಂಡನಾಯಕರ ಕಚೇರಿಯಲ್ಲಿ ಹಾವು ಕಾಣಿಸಿ ಕೊಂಡಿತು. ತಕ್ಷಣ ಬಿಬಿಎಂಪಿಯಲ್ಲಿನ ಅರಣ್ಯ ಘಟಕಕ್ಕೆ ಮಾಹಿತಿ ನೀಡ ಲಾಯಿತು. ಅಲ್ಲಿಗೆ ಬಂದ ಸಿಬ್ಬಂದಿ ಹಾವು ಹಿಡಿದು, ಆತಂಕ ದೂರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.