ADVERTISEMENT

ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಂಚಾರ ಬಂದ್‌

ಮೂಲಸೌಕರ್ಯ ಮತ್ತು ವಿಸ್ತರಣೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:20 IST
Last Updated 6 ಜೂನ್ 2019, 20:20 IST
   

ಬೆಂಗಳೂರು: ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆಯನ್ನು (1.4 ಕಿ.ಮೀ) ಜೂನ್‌ 10ರಿಂದ ಮುಚ್ಚಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

2021ರ ಪ್ರಾರಂಭದಲ್ಲಿ ಈ ಮಾರ್ಗ ಮತ್ತೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಅಲ್ಲಿಯವರೆಗೆ, ಎಲ್ಲ ವಾಹನಗಳ ಸಂಚಾರವನ್ನು ನೂತನವಾಗಿ ನಿರ್ಮಿಸಲಾಗಿರುವ ಷಟ್ಪಥ ದಕ್ಷಿಣ ಸಂಪರ್ಕ ರಸ್ತೆಯ ಕಡೆ ತಿರುಗಿಸಲಾಗುತ್ತದೆ.

ಬದಲಿ ಮಾರ್ಗ:ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಟ್ರಂಪೆಟ್‌ ಇಂಟರ್‌ಚೇಂಜ್‌ ನಂತರ, ಬಲಕ್ಕೆ ತಿರುಗಬೇಕು. ನಂತರ, ದಕ್ಷಿಣ ಸಂಪರ್ಕ ರಸ್ತೆ ಪ್ರವೇಶಿಸಿ ನಿಲ್ದಾಣವನ್ನು ತಲುಪಬೇಕು. ವಿಮಾನ ನಿಲ್ದಾಣದಿಂದ, ನಿರ್ಗಮನ ದ್ವಾರದಿಂದ ಹೊರಬರುವ ವಾಹನಗಳು ಮತ್ತೆ ದಕ್ಷಿಣ ಸಂಪರ್ಕ ರಸ್ತೆ ತಲುಪಲು ಪಿ6 ಪಾರ್ಕಿಂಗ್‌ ಕಡೆಗೆ ಸಾಗಬೇಕು. ಆಗಮನ ದ್ವಾರಗಳಿಂದ ಹಿಂದಿರುಗುವ ವಾಹನಗಳು ಪ್ರಸ್ತುತ ದಕ್ಷಿಣ ಸಂಪರ್ಕ ರಸ್ತೆ ಕಡೆಗೆ ಇರುವ ಮಾರ್ಗವನ್ನು ಬಳಸಿ ಮುಂದುವರಿಯಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.