ADVERTISEMENT

ಶಿಕ್ಷಕರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

ನೆಲಮಂಗಲ: ಶಿಕ್ಷಕರು ಆಚಾರ ವಿಚಾರಗಳಲ್ಲಿ ಪರಿಶುದ್ಧರಾಗಿ ಸರಳ ಹಾಗೂ ನಿಸ್ವಾರ್ಥ ಜೀವನ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಣತೆ ಹಚ್ಚುವಂತಾಗಬೇಕು ಎಂದು ವೈದ್ಯ ಸಂಘದ ಅಧ್ಯಕ್ಷ ಡಾ. ಎಂ.ಜಯಪ್ರಸಾದ್ ಹೇಳಿದರು.

ತಾಲ್ಲೂಕಿನ ತ್ಯಾಮಗೊಂಡ್ಲು ಕನ್ನಡ ಕೂಟ ವಿದ್ಯಾ ಸಂಸ್ಥೆಯ ಜ್ಞಾನಧಾಮ ಪ್ರಗತಿಪರ ಪಾಠಶಾಲೆಯಲ್ಲಿ ನಡೆದ ಒಂದು ದಿನದ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ತ್ಯಾಮಗೊಂಡ್ಲು ಅಂಬರೀಷ್, ನಿವೃತ್ತ ವೈದ್ಯಾಧಿಕಾರಿ ಡಾ. ಜಿ.ಎ.ವೆಂಕಟೇಶಲು ಮಕ್ಕಳ ಮನೋವಿಜ್ಞಾನದ ಬಗ್ಗೆ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅಪರ್ಣ ಸ್ವಾಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.