ADVERTISEMENT

ಶುಭ್ರ ಆಗಸ; ಉಷ್ಣಾಂಶ ಭಾರಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 20:00 IST
Last Updated 15 ಜನವರಿ 2012, 20:00 IST

ಬೆಂಗಳೂರು: ಮಕರ ಸಂಕ್ರಾಂತಿ ಸಂದರ್ಭದಲ್ಲಿ ಸೂರ್ಯ ತನ್ನ ಪಥ ಬದಲಿಸಿದ ಪರಿಣಾಮ ರಾಜ್ಯದ ಉಷ್ಣಾಂಶದಲ್ಲಿ ಭಾನುವಾರ ಭಾರೀ ಇಳಿಕೆ ಕಂಡುಬಂದಿದೆ. ವಾಯುವಿಹಾರಕ್ಕೆ ಮನೆಗಳಿಂದ ಹೊರ ಬಂದ ಜನರು ಏಕಾಏಕಿ ಹೆಚ್ಚಾದ ಚಳಿಗೆ ನಡುಗಿದರು. ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಯಾದರೂ ಚಳಿ ಕಡಿಮೆಯಾಗಿರಲಿಲ್ಲ.

ಎರಡು ದಿನಗಳಲ್ಲಿ ಬೆಂಗಳೂರು ನಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಇಳಿಕೆ ಕಂಡಿದೆ. ಕಳೆದ ವಾರ ನಗರದಲ್ಲಿ 15 ರಿಂದ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಭಾನುವಾರ ಸಂಜೆಯ ವೇಳೆಗೆ 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹೀಗಾಗಿ ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಜನತೆಗೆ ಚಳಿಯ ನಡುಕ ಇನ್ನಷ್ಟು ಹೆಚ್ಚಲಿದೆ.

`ಜನವರಿ 1ರವರೆಗೆ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಕಂಡು ಬಂದಿತ್ತು. ಆಗಸದಲ್ಲಿ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಉಷ್ಣಾಂಶದಲ್ಲಿ ಏರಿಕೆಯಾಗಿತ್ತು. ಇದರಿಂದ ಚಳಿಗಾಲ ಮುಗಿದೇ ಹೋಯಿತು ಎಂದು ಜನರು ಭಾವಿಸಿದ್ದರು. ಈಗ ಶುಭ್ರ ಆಗಸ ಇರುವುದರಿಂದ ಉಷ್ಣಾಂಶದಲ್ಲಿ ಇಳಿಕೆಯಾಗಿದ್ದು, ಚಳಿ ಹೆಚ್ಚಾಗಿದೆ~ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಬಿ.ಪುಟ್ಟಣ್ಣ ಅವರು ಹೇಳಿದರು.

`ಮುಂದಿನ ಎರಡು ದಿನಗಳವರೆಗೂ ಚಳಿ ಹೀಗೆಯೇ ಮುಂದುವರೆಯಲಿದೆ. ಕರ್ನಾಟಕದ ಈಶಾನ್ಯ ಹಾಗೂ ಒಳನಾಡು ಭಾಗಗಳಲ್ಲಿ ಚಳಿಯು ಹೆಚ್ಚಾಗಲಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಳಿ ಇರಲಿದೆ~ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ (ಜ. 13) 17.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಶನಿವಾರ 15.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕಳೆದ ವಾರದಿಂದ ಉತ್ತರ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಭಾರೀ ಅಂತರ ಕಾಣಿಸಿಕೊಂಡಿದೆ. ಸುಮಾರು ಏಳರಿಂದ ಎಂಟು ಡಿಗ್ರಿಗಳಷ್ಟು ಸೆಲ್ಸಿಯಸ್‌ನಷ್ಟು ಉಷ್ಣಾಂಶದ ಅಂತರವು ದಾಖಲಾಗಿದೆ.
ಜನವರಿ 8 ರಿಂದ 15 ರವರೆಗೆ ಉತ್ತರ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶವು ದಾಖಲಾಗಿದ್ದು, ಚಳಿ ಜನತೆಯನ್ನು ನಡುಗಿಸಿದೆ."

ಜನವರಿ 8 ರಿಂದ 15 ರವರೆಗೆ ರಾಜ್ಯದಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶದ ವಿವರ (ಡಿಗ್ರಿಗಳಲ್ಲಿ) ಈ ಕೆಳಗಿನಂತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.