ADVERTISEMENT

ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿ ಚಿತ್ರೀಕರಣ

ಸಾಫ್ಟ್‌ವೇರ್‌ ಕಂಪೆನಿಯ ಕ್ಯಾಂಟೀನ್‌ ಕೆಲಸಗಾರ ಪರಮೇಶ್‌ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಪರಮೇಶ್
ಪರಮೇಶ್   

ಬೆಂಗಳೂರು: ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್‌ ಕ್ಯಾಮೆರಾ ಇರಿಸಿ ಚಿತ್ರೀಕರಣ ಮಾಡುತ್ತಿದ್ದ ಆರೋಪದಡಿ ಪರಮೇಶ್‌ (28) ಎಂಬಾತನನ್ನು ಎಚ್‌.ಎ.ಎಲ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಂಗಳೂರಿನ ಆತ ನಾಲ್ಕು ವರ್ಷಗಳ ಹಿಂದೆ ನಗರದ ಐಟಿಪಿಎಲ್‌ ಬಳಿಯ ಸಾಫ್ಟ್‌ವೇರ್‌ ಕಂಪೆನಿಯೊಂದರ ಕ್ಯಾಂಟೀನ್‌ ಕೆಲಸಕ್ಕೆ ಸೇರಿದ್ದ. ಭಾನುವಾರ ಚಿತ್ರೀಕರಣ ಮಾಡುವ ವೇಳೆಯೇ ಮಹಿಳೆಯೊಬ್ಬರು ಆರೋಪಿಯನ್ನು ಹಿಡಿದು ಪ್ರಶ್ನಿಸಿದ್ದರು. ಅವರನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದ ಈತ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಕಂಪೆನಿಯಲ್ಲಿ ಮಹಿಳೆಯರು ಹಾಗೂ ಪುರುಷರ ಶೌಚಾಲಯಗಳು ಅಕ್ಕ–ಪಕ್ಕದಲ್ಲಿವೆ. ಬೆಳಿಗ್ಗೆ ಹಾಗೂ ಸಂಜೆ ಪುರುಷರ ಶೌಚಾಲಯಕ್ಕೆ ಹೋಗುತ್ತಿದ್ದ ಆರೋಪಿಯು ಮೊಬೈಲ್‌ ಕ್ಯಾಮೆರಾ ಆನ್‌ ಮಾಡಿ ಮಹಿಳೆಯರ ಶೌಚಾಲಯದಲ್ಲಿ ಇರಿಸುತ್ತಿದ್ದ. ಅಲ್ಲಿಗೆ ಬರುತ್ತಿದ್ದ ಮಹಿಳೆಯರ ದೃಶ್ಯಗಳು ಆ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದವು’.

ADVERTISEMENT

‘ಮೊಬೈಲ್‌ನಲ್ಲಿದ್ದ ದೃಶ್ಯಗಳನ್ನೆಲ್ಲ ಆತ ಅಳಿಸಿಹಾಕಿದ್ದರಿಂದ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಜತೆಗೆ ಮಹಿಳೆಯರ ದೃಶ್ಯಗಳನ್ನು ಆರೋಪಿಯು ಯಾವುದಕ್ಕೆ ಬಳಸಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ತನಿಖಾಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.