ADVERTISEMENT

ಸಂಖ್ಯೆ ಇಲ್ಲದ ನಾಣ್ಯ: ಮುಂದಿನ ಭಾಗ ಖಾಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:32 IST
Last Updated 16 ಏಪ್ರಿಲ್ 2013, 19:32 IST

ಬೆಂಗಳೂರು: ಹನುಮಂತನಗರದ ಚಿಲ್ಲರೆ ಅಂಗಡಿಯೊಂದರಲ್ಲಿ ಸಿಕ್ಕ ನಾಣ್ಯ ಇದು. ಈ ನಾಣ್ಯದ ಹಿಂಭಾಗ ಮಾತ್ರ ಅಚ್ಚಾಗಿದ್ದು, ಮುಂದಿನ ಭಾಗ ಖಾಲಿಯಾಗಿದೆ.

`ವಾರದ ಹಿಂದೆ ಹಣ ಎಣಿಕೆ ಮಾಡುವಾಗ ಈ ನಾಣ್ಯ ಸಿಕ್ಕಿತು. ನಾಣ್ಯದ ಸಂಖ್ಯೆಯ ಭಾಗ ಅಚ್ಚಾಗಿಲ್ಲ. ನಾಣ್ಯ ಒಂದು ರೂಪಾಯಿಯ ಆಕಾರದಲ್ಲಿದೆ. ಆದರೆ, ಹೊಸದಾಗಿ ಬಂದಿರುವ ಎರಡು ರೂಪಾಯಿಯ ನಾಣ್ಯ ಕೂಡಾ ಇದೇ ಅಳತೆಯಲ್ಲಿರುವುದರಿಂದ ಇದು ಎಷ್ಟು ರೂಪಾಯಿಯ ನಾಣ್ಯ ಎಂಬುದು ಗೊತ್ತಾಗುತ್ತಿಲ್ಲ' ಎಂದು ಅಂಗಡಿಯ ಮಾಲೀಕ ಟಿ.ಎನ್.ಶ್ರೀನಿವಾಸ್ ತಿಳಿಸಿದರು. ಶ್ರೀನಿವಾಸ್ ಈ ನಾಣ್ಯವನ್ನು ಭಾನುವಾರ `ಪ್ರಜಾವಾಣಿ' ಕಚೇರಿಗೆ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.