ADVERTISEMENT

ಸಂಚಾರ ದಟ್ಟಣೆ: ಆಂಬುಲೆನ್ಸ್‌ಗೆ ದಾರಿ ನೀಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:20 IST
Last Updated 26 ಫೆಬ್ರುವರಿ 2012, 19:20 IST
ಸಂಚಾರ ದಟ್ಟಣೆ: ಆಂಬುಲೆನ್ಸ್‌ಗೆ ದಾರಿ ನೀಡಿ
ಸಂಚಾರ ದಟ್ಟಣೆ: ಆಂಬುಲೆನ್ಸ್‌ಗೆ ದಾರಿ ನೀಡಿ   

ಬೆಂಗಳೂರು: ಸಂಚಾರ ದಟ್ಟಣೆಯಲ್ಲಿ ಆಂಬುಲೆನ್ಸ್‌ಗೆ ದಾರಿ ನೀಡಿ ಜೀವಗಳನ್ನು ಉಳಿಸುವುದು ಹೇಗೆ ಎಂಬುದರ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ನಗರದ ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ಸಂಜೆ ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.

ಫ್ಲಾಶ್ ಮಾಬ್ ಜ್ಯೂಸ್ ಕನೆಕ್ಟ್ ಯುವ ಫೋರಂ ಆಯೋಜಿಸಿದ್ದ  ಜನ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಆ್ಯಂಬುಲೆನ್ಸ್ ಅಪಘಾತಕ್ಕೆ ಈಡಾದ ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ  ಎಂಬುದನ್ನು ಸಾರಿದರು.

ಅಮೆರಿಕ ಸೇನೆಯ ಡಾ.ಆರ್.ಆಡಮ್ಸ ಮಾತನಾಡಿ, `ಗಾಯಗೊಂಡವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿದರೆ, ಅವರ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ~ ಎಂದರು.

ನಿವೃತ್ತ ಕರ್ನಲ್ ಡಾ.ಮುಕುಲ್ ಸಕ್ಸೇನಾ ಮಾತನಾಡಿ, `ಕನಿಷ್ಠ ಶೇಕಡಾ 12 ರಿಂದ 15 ರಷ್ಟು ಜನರು ಆಂಬುಲೆನ್ಸ್‌ಗಳು ವೇಳೆಗೆ ಸರಿಯಾಗಿ ಆಸ್ಪತ್ರೆಗೆ ತಲುಪಿದರೆ, ರೋಗಿಯನ್ನು ಉಳಿಸಬಹುದು.

ಆದರೆ, ಬಹಳಷ್ಟು ಜನರು ಆಂಬುಲೆನ್ಸ್ ಚಾಲಕರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ~ ಎಂದು ಹೇಳಿದರು.
`ಸಂಚಾರಿ ಪೊಲೀಸರ ಅಂಕಿ-ಅಂಶಗಳ ಪ್ರಕಾರ 2011 ರಲ್ಲಿ ಸುಮಾರು 757 ಮಂದಿ ರಸ್ತೆ ಅಪಘಾತದಲ್ಲಿ ಸತ್ತಿದ್ದಾರೆ. ಅದರಲ್ಲಿ 90 ಮಂದಿಯನ್ನು  ಆಸ್ಪತ್ರೆಗೆ ಬೇಗ ಸಾಗಿಸಿದ್ದರಿಂದ ಬದುಕಿದ್ದಾರೆ~ ಎಂದು ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.