ADVERTISEMENT

ಸಂತಸದ ಯಲಹಂಕ ಗ್ರಾಮದೇವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:05 IST
Last Updated 18 ಏಪ್ರಿಲ್ 2012, 19:05 IST

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕಿನ ಜಾಲಾ ಹೋಬಳಿ ಬೆಟ್ಟ ಹಲಸೂರು ಗ್ರಾಮದಲ್ಲಿ ಮುತ್ಯಾಲಮ್ಮದೇವಿ ಹಾಗೂ ಗ್ರಾಮದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಟ್ಟ ಹಲಸೂರು, ಸೊಣಪನಹಳ್ಳಿ, ನಾರಾಯಣಪುರ, ನೆಲ್ಲುಕುಂಟೆ, ಗಂಗಾನಗರ ಬಡಾವಣೆಗಳ ಮಹಿಳೆಯರು ತಂಬಿಟ್ಟು ಮತ್ತು ಬೆಲ್ಲದ ಆರತಿ ಹೊತ್ತು ರಥೋತ್ಸವದಲ್ಲಿ ಭಾಗಿಯಾದರು. ಭಕ್ತಾದಿಗಳೊಂದಿಗೆ ಅಗ್ನಿಕುಂಡದಲ್ಲಿ ಸಾಗಿದ ನಂತರ ದೇವಿಗೆ ಆರತಿ ಬೆಳಗಿ ತಮ್ಮ ಹರಕೆ ತೀರಿಸಿದರು.

ಡೊಳ್ಳುಕುಣಿತ, ನಂದಿ ಧ್ವಜ, ಪಟದ ಕುಣಿತ, ವೀರಗಾಸೆ ಹಾಗೂ ತಮಟೆ ವಾದ್ಯ ಮತ್ತಿತರ ಜಾನಪದ ಕಲಾ ತಂಡಗಳು ರಥೋತ್ಸವಕ್ಕೆ ಕಳೆ ತಂದವು. ಸಮಾಜ ಸೇವಕಿ ಮೀನಾಕ್ಷಿ ಶೇಷಾದ್ರಿ,  ಗ್ರಾ.ಪಂ. ಅಧ್ಯಕ್ಷ ಆಂಜಿನಪ್ಪ, ಮಾಜಿ ಅಧ್ಯಕ್ಷರಾದ ಬಿ.ಕೆ.ಮಂಜುನಾಥಗೌಡ, ನಾರಾಯಣಗೌಡ, ಎಸ್.ಕೆ.ಆಂಜಿನಪ್ಪ, ಸದಸ್ಯ ಬಿ.ಜಿ.ರಮೇಶ್ ಮತ್ತಿತರರು ಹಾಜರಿದ್ದರು. ಗುರುವಾರ ಅಮ್ಮನವರಿಗೆ ಎಡೆ ಹಾಕಿದ ನಂತರ ಅನ್ನಸಂತರ್ಪಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.