ADVERTISEMENT

ಸಂಭ್ರಮದಿಂದ ನಡೆದ ಮಧುರಾಂಬಿಕಾ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಮಹದೇವಪುರ: ವರ್ತೂರು ಸಮೀಪದ ಮಧುರಾ ನಗರದಲ್ಲಿ ಮಧುರಾಂಬಿಕಾ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ದೇವರ ಮಹಾಭಿಷೇಕದೊಂದಿಗೆ ಆರಂಭಗೊಂಡ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನದವರೆಗೆ ನಡೆದವು. 2 ಗಂಟೆಗೆ ನಡೆದ ಬ್ರಹ್ಮ ರಥೋತ್ಸವಕ್ಕೆ ಸಚಿವ ಆರ್.ವರ್ತೂರು ಪ್ರಕಾಶ್ ಹಾಗೂ ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಚಾಲನೆ ನೀಡಿದರು.

ವರ್ತೂರು, ಗುಂಜೂರು, ಸೋರಹುಣಸೆ, ಮುತ್ಸಂದ್ರ, ಬೆಳ್ಳಿಕೆರೆ, ವೈಟ್‌ಫೀಲ್ಡ್, ಇಮ್ಮಡಿಹಳ್ಳಿ, ಪಣತ್ತೂರು ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ವೆಂಕಟೇಶ್ವರ, ಯಲ್ಲಮ್ಮ ದೇವಿ, ಆಂಜನೇಯ ಸ್ವಾಮಿ ಸೇರಿದಂತೆ ಒಟ್ಟು 15 ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ADVERTISEMENT

ಗೊಂಬೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಗಮನ ಸೆಳೆದವು. ಉಚಿತ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.