ADVERTISEMENT

ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 11:01 IST
Last Updated 4 ಸೆಪ್ಟೆಂಬರ್ 2013, 11:01 IST
ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್
ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್   

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿ.ಎಸ್ ಸತ್ಯನಾರಾಯಣ (ಕಟ್ಟೆ ಸತ್ಯ) ಬುಧವಾರ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ  ಮೇಯರ್ ಆಗಿ ಸತ್ಯನಾರಾಯಣ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್‌ನ ಇಂದಿರಾ ಆಯ್ಕೆಯಾಗಿದ್ದಾರೆ.

ಬಿ.ಎನ್ ಸತ್ಯನಾರಾಯಣ ಅವರು ಬಸವನಗುಡಿ ವಾರ್ಡ್ ಅನ್ನು ಪ್ರತಿನಿಧಿಸಿದ್ದರೆ, ಇಂದಿರಾ ಅವರು ಬ್ಯಾಟರಾಯನಪುರ ವಾರ್ಡ್‌ನಿಂದ  ಆರಿಸಿ ಬಂದಿದ್ದಾರೆ. ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್‌ನ ಇಂದಿರಾ ಉಪ ಮೇಯರ್ ಆಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.