ADVERTISEMENT

ಸಮಾಜ ಸೇವೆಗೆ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:40 IST
Last Updated 18 ಫೆಬ್ರುವರಿ 2012, 19:40 IST

ಕೃಷ್ಣರಾಜಪುರ: ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ಸಂಸ್ಥೆಗಳಿಗೆ ಸರ್ಕಾರಗಳು ಹೆಚ್ಚಿನ ನೆರವು ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಹೇಳಿದರು.

ಇಲ್ಲಿಗೆ ಸಮೀಪದ ಎ.ಎಸ್.ಆರ್.ಕಲ್ಯಾಣ ಮಂಟಪದಲ್ಲಿ ಸದ್ಗುರು ಸೇವಾ ಸಮಿತಿ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಅನುದಾನ ಶೇ 75ರಷ್ಟು ಮಾತ್ರ ಸಂಸ್ಥೆಗಳಿಗೆ ಸೇರುತ್ತದೆ. ಹೀಗಾಗಿ ಅಸಹಾಯಕರ ಅಳಲಿಗೆ ಸ್ವಂದಿಸಲು ಸಾಧ್ಯವಿಲ್ಲ ಎಂದು ಸಂಘ ಸಂಸ್ಥೆಗಳು ದೂರಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಗೆ ಹೆಚ್ಚಿನ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು~ ಎಂದು ಭರವಸೆ ನೀಡಿದರು.


ಬಿಬಿಎಂಪಿ ಸದಸ್ಯ ಎಂ.ರೇವಣ್ಣ ಮಾತನಾಡಿ, ಯಶೋಧರಮ್ಮ ದಾಸಪ್ಪ ಅವರು ತ್ಯಾಗ ಮತ್ತು ತತ್ವ ನಿಷ್ಠೆಗಳಿಂದ 1970ರಲ್ಲಿ ಸ್ವಯಂಸೇವಾ ಸಂಸ್ಥೆಗಳನ್ನು ಒಗ್ಗೂಡಿಸಿದರು. ಅವರ ಶ್ರಮವನ್ನು ಅರ್ಥ ಮಾಡಿಕೊಂಡು ಸಮಾಜದ ಕೆಳಸ್ತರದಲ್ಲಿರುವವರನ್ನು ಗುರುತಿಸಿ ನೆರವು ನೀಡುವ ಮೂಲಕ ಸಮಾಜಮುಖಿಯಾಗಿಸುವ ಜವಾಬ್ದಾರಿ ಪದಾಧಿಕಾರಿಗಳ ಹೆಗಲ ಮೇಲಿದೆ ಎಂದರು.

  ರಾಜ್ಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕುಬೇರ್, ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಮಾತನಾಡಿದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಕಾರ್ಯದರ್ಶಿ ಸುಶೀಲಮ್ಮ, ಸಮಿತಿಯ ಉಪಾಧ್ಯಕ್ಷ ಜಿ.ವೆಂಕಟೇಶ್, ವಾರ್ಡ್ ಅಧ್ಯಕ್ಷ ಹನುಮಂತು, ಸಂಚಾಲಕ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT