ADVERTISEMENT

ಸರ್ಕಾರಿ ಶಾಲೆಯಲ್ಲಿ ಶಿಕ್ಷಣ: ಉನ್ನತ ಹುದ್ದೆಗೆ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ರಾಜರಾಜೇಶ್ವರಿನಗರ: `ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ~ ಎಂದು ಪೀಡಸ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಫಾದರ್ ಸೀಡ್ಸ್ ಹೇಳಿದರು.

ಕುಂಬಳಗೋಡು ಬಳಿಯ ಗೇರು ಪಾಳ್ಯದಲ್ಲಿ ಪೀಡಸ್ ಇಂಡಿಯಾ ಸಂಸ್ಥೆ ಹಮ್ಮಿಕೊಂಡಿದ್ದ `ಬಾಲ ಸಂಗಮ 2012~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ದೃಷ್ಟಿಯಿಂದ ಪ್ರತಿ ವರ್ಷ ಬಾಲಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕುಂಬಳಗೋಡು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. `ಪೀಡಸ್ ಇಂಡಿಯಾ ಸಂಸ್ಥೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳನ್ನು ಕಲೆ ಹಾಕಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವುದರ ಮೂಲಕ ಗ್ರಾಮೀಣ ಸಂಸ್ಕೃತಿ, ಜಾನಪದ ಕಲೆಗಳನ್ನು ಬೆಳೆಸಲು ಮುಂದಾಗಿದೆ~ ಎಂದು  ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಂಸ್ಥೆಯ ಶಿಭು ಫಾದರ್, ರಿಜು ಫಾದರ್, ಪ್ರಾಂಶುಪಾಲ ಪ್ರಶಾಂತ್, ತೇಜಸ್ ವಿದ್ಯಾಸಂಸ್ಥೆಯ ಫಾದರ್‌ಜೇಕಡ್, ತರಬೇತಿ ಮುಖ್ಯಸ್ಥ ಅಣ್ಣಯ್ಯಚಾರ್, ಗ್ರಾ.ಪಂ.ಸದಸ್ಯರಾದ ಅಣ್ಣಯ್ಯಪ್ಪ, ಕಾಳಪ್ಪ ಶಿಕ್ಷಣ ಇಲಾಖೆಯ ಮುತ್ತಯ್ಯ, ರಾಮಕೃಷ್ಣಯ್ಯ, ವಿದ್ಯ ಕುಲಕರ್ಣಿ ಹಾಜರಿದ್ದರು.

ಸರ್ಕಾರಿ ಶಾಲೆ ಸೇರಿದಂತೆ ಹಲವು ವಿದ್ಯಾಸಂಸ್ಥೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.