
ಪ್ರಜಾವಾಣಿ ವಾರ್ತೆಬೆಂಗಳೂರು: ಗಣಿತ ಮತ್ತು ಭೌತ ವಿಜ್ಞಾನದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ನೆರವಾಗುವ ಸ್ಟೆಮ್ ಮತ್ತು ರೋಬೊಟಿಕ್ ಬೋಧನಾ ವಿಧಾನವನ್ನು ನಗರದ ಎರಡು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿದೆ.
ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಾಗೂ ಎಲ್.ಎನ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ಸಹಯೋಗದಲ್ಲಿ ವೀರಭದ್ರನಗರ ಮತ್ತು ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ರೋಬೊಟಿಕ್ ಪ್ರಯೋಗಾಲಯಗಳನ್ನು ಉಚಿತವಾಗಿ ನಿರ್ಮಿಸಲಾಗಿದೆ.
ಪ್ರಯೋಗಾಲಯಗಳು ಜಪಾನಿನ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯು ರೂಪಿಸಿರುವ ರೋಬೊಟಿಕ್ ತಂತ್ರಜ್ಞಾನ ಅಳವಡಿಸಿರುವ 8 ಲ್ಯಾಪ್ಟಾಪ್ ಮತ್ತು 15 ರೋಬೊಟ್ಗಳನ್ನು ಒಳಗೊಂಡಿದ್ದು ಬೋಧನೆಗೆ ನುರಿತ ಶಿಕ್ಷಕರನ್ನು ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.