ADVERTISEMENT

‘ಸಹಕಾರಿ ಬ್ಯಾಂಕ್‌ಗಳು ವಿಸ್ತರಣೆಯಾಗಲಿ’

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಸಹಕಾರ ಸಂಘಗಳ ಉಪನಿಬಂಧಕ ಪ್ರಸಾದ್ ರೆಡ್ಡಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಅಧ್ಯಕ್ಷ ಸದಾಶಿವರೆಡ್ಡಿ, ಚನ್ನಾರೆಡ್ಡಿ, ಮುಖ್ಯ ಅತಿಥಿ ಟಿ.ಆರ್ ಶ್ರೀನಿವಾಸ ರೆಡ್ಡಿ, ಮುತ್ತಪ್ಪ ಇದ್ದರು.
ಸಹಕಾರ ಸಂಘಗಳ ಉಪನಿಬಂಧಕ ಪ್ರಸಾದ್ ರೆಡ್ಡಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಅಧ್ಯಕ್ಷ ಸದಾಶಿವರೆಡ್ಡಿ, ಚನ್ನಾರೆಡ್ಡಿ, ಮುಖ್ಯ ಅತಿಥಿ ಟಿ.ಆರ್ ಶ್ರೀನಿವಾಸ ರೆಡ್ಡಿ, ಮುತ್ತಪ್ಪ ಇದ್ದರು.   

ಬೆಂಗಳೂರು: ಸಹಕಾರಿ ಬ್ಯಾಂಕುಗಳು ನಗರದಲ್ಲಿಯೇ ಕೇಂದ್ರೀಕೃತವಾಗದೇ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಣೆ ಆಗಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕ ಸಿ.ಪ್ರಸಾದ್ ರೆಡ್ಡಿ ಹೇಳಿದರು.

ಭಾನುವಾರ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ 5ನೇ ನೂತನ ಅರಕೆರೆ ಶಾಖೆ ಉದ್ಘಾಟನೇ ವೇಳೆ ಅವರು ಮಾತನಾಡಿದರು

ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿ ನೀಡುವುದು ಸಹಕಾರಿ ಬ್ಯಾಂಕ್‌ಗಳಿಗೆ ಕಷ್ಟಕರವಾಗಿದೆ. ಆದರೂ ಈ ಬ್ಯಾಂಕುಗಳು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದರು.

ADVERTISEMENT

ಬ್ಯಾಂಕಿನ ಅಧ್ಯಕ್ಷ ಸದಾಶಿವ ರೆಡ್ಡಿ, ‘ಮಾರ್ಚ್ ಅಂತ್ಯಕ್ಕೆ ₹13.80 ಕೋಟಿ ಷೇರು ಬಂಡವಾಳದೊಂದಿಗೆ, ₹205 ಕೋಟಿ ಠೇವಣಿ ಹೊಂದಿದ್ದು, ಮೂರೂವರೆ ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವಲ್ಲಿ ನಮ್ಮ ಬ್ಯಾಂಕು ಸಫಲವಾಗಿದೆ’ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ರಾಮಸುಬ್ಬು, ಲಾಭ ಗಳಿಕೆಯೇ ಬ್ಯಾಂಕುಗಳ ಉದ್ದೇಶವಾಗದೇ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.