ADVERTISEMENT

`ಸಾಂಸ್ಕೃತಿಕ ವಿಚಾರದಿಂದ ಉತ್ತಮ ಭವಿಷ್ಯ ಸಾಧ್ಯ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 20:01 IST
Last Updated 1 ಏಪ್ರಿಲ್ 2013, 20:01 IST

ನೆಲಮಂಗಲ:  ಸಾಂಸ್ಕೃತಿಕ ವಿಚಾರಗಳನ್ನು ಅಳವಡಿಸಿಕೊಂಡಾಗ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಆಧುನಿಕತೆಯಿಂದ ಹೊರಕ್ಕೆ ಮುಖ ಮಾಡಿ ನೋಡಿದಾಗ ಕಲೆ, ಸಾಹಿತ್ಯ, ಸಂಸ್ಕೃತಿಯ ನೆಲೆಗಳು ಕಾಣಸಿಗುತ್ತವೆ ಎಂದು ಜನಪದ ವಿದ್ವಾಂಸ ಕಂಟಲಗಿ ಸಣ್ಣಹೊನ್ನಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ದಿವ್ಯಜ್ಯೋತಿ ಕಲಾ ಕೇಂದ್ರ, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿ ಪ್ರೊ.ಕೆ.ಬಿ.ಸಿದ್ದಯ್ಯ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾದದ್ದು ಎಂದರು.  ಜಾದೂಗಾರ ಪ್ರೊ.ಎಂ.ರಾಜ್, ಜಾನಪದ ಅಕಾಡೆಮಿ ಸದಸ್ಯ ಮೇಕಪ್ ಕೃಷ್ಣ, ಗುಬ್ಬಿ ಕಂಪೆನಿಯ ಹಿರಿಯ ಕಲಾವಿದ ಎಂ.ಪಿ.ಎಸ್.ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜಗೋಪಾಲ್ ನಿರ್ದೇಶನದ ಡಾ.ಗಿರೀಶ್ ಕಾರ್ನಾಡ್ ಅವರ `ಮಾನಿಷಾದ', ಎನ್.ಎಸ್.ರಾವ್ ಅವರ `ವಿಷಜ್ವಾಲೆ' ನಾಟಕಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.