ADVERTISEMENT

ಸೌಲಭ್ಯ ವಂಚಿತ ಹಕ್ಕಿ ಪಿಕ್ಕಿ ಸಮುದಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ಹಕ್ಕಿ–ಪಿಕ್ಕಿ ಸಮುದಾಯದ ಕಾಲೋನಿ
ಹಕ್ಕಿ–ಪಿಕ್ಕಿ ಸಮುದಾಯದ ಕಾಲೋನಿ   

ಬೆಂಗಳೂರು: ನಗರದಿಂದ 25 ಕಿ.ಮೀ. ದೂರದ ಯಲಚಗುಪ್ಪೆ ಸಮೀಪದ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಹಕ್ಕಿ-ಪಿಕ್ಕಿ ಸಮುದಾಯ ಯಾವುದೇ ಮೂಲಸೌಕರ್ಯ ಇಲ್ಲದೆ ಬದುಕುತ್ತಿದ್ದಾರೆ.

ಸುಮಾರು 100 ಕುಟುಂಬಗಳು 8 ವರ್ಷಗಳ ಹಿಂದೆ ಕೆಂಗೇರಿ ಉಪನಗರದಿಂದ ಸ್ಥಳಾಂತರಗೊಂಡಿದ್ದವು. ಆಗಿನಿಂದಲೂ ಗುಡಿಸಲು ಹಾಕಿಕೊಂಡು ಇಲ್ಲಿ ವಾಸಿಸುತ್ತಿದ್ದಾರೆ. ವಿದ್ಯುತ್‌, ಆರೋಗ್ಯ, ರಸ್ತೆ ಹೀಗೆ ಅಗತ್ಯ ಸೌಲಭ್ಯಗಳಿಂದ ಈ ಸಮುದಾಯದ ಜನರು ವಂಚಿತರಾಗಿದ್ದಾರೆ.

‘ಕಾಲೋನಿಯಿಂದ 2 ಕಿ.ಮೀ ಸಂಚರಿಸಿ, ಕೆಂಚನಪುರ ಅಥವಾ ಯಲಚಗುಪ್ಪೆಗೆ ಹೋಗಿ ಬಸ್‌ ಸೇವೆ ಪಡೆಯಬೇಕು. ಇದರಿಂದ ವೃದ್ದರು ಮತ್ತು ಗರ್ಭಿಣಿಯರು ಕಷ್ಟಪಡಬೇಕಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ADVERTISEMENT

ಯಲಚಗುಪ್ಪೆ ಬಳಿಗೆ ಸ್ಥಳಾಂತರಿಸಿದಾಗ ಎಲ್ಲಾ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪಡಿತರ ಚೀಟಿಯೊಂದನ್ನು ಬಿಟ್ಟರೆ ಯಾವುದೇ ಸೌಲಭ್ಯ ನೀಡಿಲ್ಲ. ಬಸ್‌ ವ್ಯವಸ್ಥೆ ಇಲ್ಲದೆ ಮಕ್ಕಳಿಗೆ ಶಾಲೆಗೆ ಕಳುಹಿಸಲು ಆಗುತ್ತಿಲ್ಲ’ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಜಿ.ನರಸಿಂಹಮೂರ್ತಿ, ‘ಸಮಾಜಕಲ್ಯಾಣ ಸಚಿವ ಆಂಜನೇಯ ಅವರು ಒಂದು ತಿಂಗಳೊಳಗೆ ಈ ಕಾಲೋನಿಗೆ ಮೂಲಸೌಕರ್ಯ ಕಲ್ಪಿಸಿ ಕೊಡದಿದ್ದರೆ, ಅವರ ನಿವಾಸ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.