ADVERTISEMENT

ಸ್ವಚ್ಛ ಪರಿಸರಕ್ಕೆ ಮಕ್ಕಳಿಂದ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ತಲಘಟ್ಟಪುರ: `ಪರಿಸರವನ್ನು ಸ್ವಚ್ಛವಾಗಿಡಿ, ಬೆಂಗಳೂರು ನಗರದ ಅಂದವನ್ನು ಕಾಪಾಡಿ~ ಎಂಬ ಘೋಷಣೆಯೊಂದಿಗೆ ಎಡಿಫೈ ವಿದ್ಯಾಸಂಸ್ಥೆಯ ಮಕ್ಕಳು ಕನಕಪುರ ರಸ್ತೆಯ ಅಂಜನಾಪುರ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಜಾಥಾ ನಡೆಸಿದರು.

ಅಂಜನಾಪುರ ವಾರ್ಡ್‌ನ ಬಿಬಿಎಂಪಿ ಸದಸ್ಯ ಎಸ್.ಗಂಗಾಧರ್ ಮಕ್ಕಳೊಂದಿಗೆ ಸೇರಿ ವಿವಿಧ ಬೀದಿಗಳಲ್ಲಿ ಸಂಚರಿಸಿ, `ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು, ಸುತ್ತಮುತ್ತಲಿನ ಪರಿಸರವನ್ನುಸ್ವಚ್ಚವಾಗಿಟ್ಟುಕೊಳ್ಳ ಬೇಕು~ ಎಂದು ಮನವಿ ಮಾಡಿದರು.

`ಕಸದ ತೊಟ್ಟಿಯಲ್ಲಿಯೇ ತ್ಯಾಜ್ಯ ಹಾಕಿಸುವುದು, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸುವುದು ನಮ್ಮ ಆಂದೋಲನದ ಗುರಿ~ ಎಂದು ಪ್ರಾಂಶುಪಾಲರಾದ ನಿತಿ ಮಹೇಂದ್ರ ಹೇಳಿದರು.ಕಿಂಡರ್ ಗಾರ್ಡನ್ ಮಕ್ಕಳಾದ ಜಿ.ಪೂರ್ವಾಂಕ, ಗಿತಿಕ ಗೆಳೆಯರೊಂದಿಗೆ ಪೀಪಿ ಊದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.