ADVERTISEMENT

ಹೃದಯ ಕವಾಟ ಮರುಜೋಡಣೆಗೆ ನೀಡ್ಲ್‌ ಪ್ರಿಕ್‌ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:40 IST
Last Updated 24 ಅಕ್ಟೋಬರ್ 2017, 19:40 IST

ಬೆಂಗಳೂರು: ಹೃದ್ರೋಗದಿಂದ ಬಳಲುವವರಿಗೆ ಆಂಜಿಯೋಪ್ಲಾಸ್ಟಿಗೆ ಪರ್ಯಾಯವಾಗಿ ‘ನೀಡ್ಲ್‌ ಪ್ರಿಕ್‌’ ವಿಧಾನದಲ್ಲಿ ಮಹಾಪಧಮನಿಯ ಕವಾಟ ಮರು ಜೋಡಣೆ (ಟಿಎವಿಆರ್‌–ಟ್ರಾನ್ಸ್‍ಕ್ಯಾಥಟರ್ ಅಯೋರ್ಟಿಕ್ ವಾಲ್ವ್ ರಿಪ್ಲೇಸ್‍ಮೆಂಟ್) ಚಿಕಿತ್ಸೆ ಮಣಿಪಾಲ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ವೈದ್ಯ ಪ್ರೊ.ರಂಜನ್‌ ಶೆಟ್ಟಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

79 ವರ್ಷದ ರೋಗಿಯೊಬ್ಬರಿಗೆ ಇತ್ತೀಚೆಗೆ ಈ ಬಗೆಯ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಇದುವರೆಗೆ ಮೂವರು ಇಂಥ ಚಿಕಿತ್ಸೆ ಪಡೆದಿದ್ದಾರೆ. ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗಲು ದೈಹಿಕವಾಗಿ ಸಮರ್ಥವಿಲ್ಲದ 60 ವರ್ಷ ಮೇಲ್ಪಟ್ಟವರಿಗೆ ಈ ಚಿಕಿತ್ಸಾ ವಿಧಾನ ವರದಾನವಾಗಿದೆ. ನೀಡ್ಲ್‌ ಪ್ರಿಕ್‌ ಚಿಕಿತ್ಸೆ 45 ನಿಮಿಷ ತೆಗೆದುಕೊಳ್ಳಲಿದ್ದು, ರೋಗಿ ಮೂರು ದಿನಗಳಲ್ಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ದೈನಂದಿನ ಬದುಕಿಗೆ ಮರಳಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT