ADVERTISEMENT

‘ಹೆಬ್ಬೆಟ್ ರಾಮಕ್ಕ’ಗೆ ರಾಷ್ಟ್ರ ಪ್ರಶಸ್ತಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ವಿನೋದ್ ಖನ್ನಾಗೆ ಫಾಲ್ಕೆ ಗೌರವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 20:54 IST
Last Updated 13 ಏಪ್ರಿಲ್ 2018, 20:54 IST
ಹೆಬ್ಬೆಟ್‌ ರಾಮಕ್ಕದಲ್ಲಿ ತಾರಾ, ದೇವರಾಜ್‌
ಹೆಬ್ಬೆಟ್‌ ರಾಮಕ್ಕದಲ್ಲಿ ತಾರಾ, ದೇವರಾಜ್‌   

ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ನಂಜುಂಡೇಗೌಡ ನಿರ್ದೇಶನದ ಕನ್ನಡದ ‘ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಹಾಗೂ ಜೆ.ಎಂ. ಪ್ರಹ್ಲಾದ್‌ ಬರೆದ ‘ಮಾರ್ಚ್‌ 22’ ಚಿತ್ರದ ‘ಮುತ್ತು ರತ್ನದಾ ಪ್ಯಾಟೆ’ ಹಾಡಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ದೊರಕಿದೆ.

ಅಭಯ ಸಿಂಹ ನಿರ್ದೇಶನದ ‘ಪಡ್ಡಾಯಿ’ಗೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಬಂದಿದೆ.

‘ಹೆಬ್ಬೆಟ್ ರಾಮಕ್ಕ’ ಚಿತ್ರ ‘ರಾಜಕೀಯದಲ್ಲಿ ಮಹಿಳಾ ಮೀಸಲಾತಿ’ಯ ಕುರಿತಾದ ಕಥೆ ಹೊಂದಿದೆ. ಚಿತ್ರದಲ್ಲಿ ತಾರಾ, ದೇವರಾಜ್ ಅಭಿನಯಿಸಿದ್ದಾರೆ.

ADVERTISEMENT

‘ಮಾಮ್’ ಚಿತ್ರದ ನಟನೆಗಾಗಿ ದಿವಂಗತ ಶ್ರೀದೇವಿ ಅವರನ್ನು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ, ನಟ ದಿವಂಗತ ವಿನೋದ್ ಖನ್ನಾ ಅವರಿಗೆ ಚಿತ್ರರಂಗದ ಸರ್ವಶ್ರೇಷ್ಠ ಗೌರವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ‘ನಾಗರಕೀರ್ತನ್’ ಚಿತ್ರದ ಅಭಿನಯಕ್ಕೆ ರಿಧಿ ಸೇನ್‌ಗೆ ಅತ್ಯುತ್ತಮ ನಟ, ‘ಇರಾದಾ’ ಹಿಂದಿ ಚಿತ್ರದ ನಟನೆಗೆ ದಿವ್ಯಾ ದತ್‌ಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಘೋಷಿಸಲಾಗಿದೆ.

ಎನ್.ಆರ್. ನಂಜುಂಡೇಗೌಡ

**

ಜೆ. ಎಂ. ಪ್ರಹ್ಲಾದ್

**

ಅಭಯ ಸಿಂಹ

**

ವಿನೋದ್ ಖನ್ನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.