ADVERTISEMENT

ಹೊರರಾಜ್ಯಗಳ ಕಾರ್ಮಿಕರಲ್ಲಿ ಕನ್ನಡದ ಅರಿವಿಗೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಪೀಣ್ಯ ದಾಸರಹಳ್ಳಿ: `2015ಕ್ಕೆ ಶತಮಾನದ ವರ್ಷವಾಗಿರುವುದರಿಂದ 325 ದಿನಗಳು ನಗರದ ಎಲ್ಲ ಕ್ಷೇತ್ರಗಳಲ್ಲೂ ಸಾಂಸ್ಕೃತಿಕ, ಸಾಹಿತ್ಯ, ಜಾನಪದ ಸೇರಿದಂತೆ ಕನ್ನಡಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತದೆ~ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ನೂತನ ಅಧ್ಯಕ್ಷ ಟಿ. ತಿಮ್ಮೇಶ್ ಹೇಳಿದರು.

ದಾಸರಹಳ್ಳಿ ಕ್ಷೇತ್ರ ಕನ್ನಡ ಕ್ರಿಯಾ ಸಮಿತಿಯು ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, `ನಗರದ 28 ಕ್ಷೇತ್ರಗಳಲ್ಲಿ ತಿಂಗಳಿಗೆ ಎರಡು ಕಾರ್ಯಕ್ರಮಗಳನ್ನಾದರೂ ರೂಪಿಸಲಾಗುತ್ತದೆ. ಕನ್ನಡಕೋಸ್ಕರ ನಿರಂತರವಾಗಿ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅಂತಹವರಿಗೆ 25 ಸಾವಿರ ರೂಪಾಯಿ ನಗದಿನೊಂದಿಗೆ ಪ್ರಶಸ್ತಿ ನೀಡಲು ಚಿಂತನೆ ನಡೆಸಲಾಗಿದೆ~ ಎಂದರು.

ಉತ್ತರ ಭಾರತ, ಬಿಹಾರ ಸೇರಿದಂತೆ ಹಲವು ಭಾಗಗಳಿಂದ ನಗರಕ್ಕೆ ಬಂದಿರುವ ಕೆಲಸಗಾರರಿಗೆ ಕನ್ನಡದ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾಲೇಜುಗಳಲ್ಲಿ ಕನ್ನಡ ಪರವಾದ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಹಾಕಿಕೊಳ್ಳಲಾಗುವುದು ಎಂದರು.

ಪ್ರೊ. ಬೆಳಗೆರೆ ಲಿಂಗರಾಜು, ಸಮಾಜ ಸೇವಕ ಜಿ.ನಾ.ಗೋಪಾಲಕೃಷ್ಣ, ಉಪನ್ಯಾಸಕ ಭಾಸ್ಕರ್, ಪರಿಷತ್ತಿನ ಮಾಜಿ ಪದಾಧಿಕಾರಿಗಳಾದ ಪ್ರಹ್ಲಾದ್ ನವೋದಯ, ರಮೇಶ್ ಸಮಿತಿ ಅಧ್ಯಕ್ಷ ಕುಮಾರ್, ಪದಾಧಿಕಾರಿಗಳಾದ ವೇಣುಗೋಪಾಲ್, ಈಶ್ವರ್, ಪ್ರಸನ್ನ ಕುಮಾರ್, ನಾಗರತ್ನ, ಗೋವಿಂದರಾಜ್, ಮಂಜುನಾಥ್, ವೀರಭದ್ರ, ಲಕ್ಷ್ಮೀನಾರಾಯಣ್ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.