ಬೆಂಗಳೂರು: `ಹಳೇ ಬಜೆಟ್‌ಗೆ ಟಿಂಕರಿಂಗ್ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ. ಅಭಿವೃದ್ಧಿಗೆ ಪೂರಕವಾದ ಬಜೆಟ್ ಕೂಡ ಅಲ್ಲ~ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು.
`ಇದೊಂದು ನಿರಾಶಾದಾಯಕ ಬಜೆಟ್~ ಎಂದು ಬಣ್ಣಿಸಿದ ಅವರು, `ಪ್ರತ್ಯೇಕ ಕೃಷಿ ಬಜೆಟ್~ ಎಂದು ಜನರನ್ನು ದಿಕ್ಕುತಪ್ಪಿಸಿರುವ ಮುಖ್ಯಮಂತ್ರಿ, ರೈತರು ಮತ್ತು ಬಡವರ ಪರ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ. ಕಳೆದ ವರ್ಷದ ಬಜೆಟ್‌ನಲ್ಲೂ ಕೋಟಿಗಟ್ಟಲೆ ಹಣ ಕೊಡುವ ಭರವಸೆ ನೀಡಲಾಗಿತ್ತು. ಆದರೆ, ಬಿಡುಗಡೆ ಮಾಡಿದ್ದು ಮಾತ್ರ ನಗಣ್ಯ. `ಸುವರ್ಣ ಭೂಮಿ~ ಯೋಜನೆಗೆ ಮೀಸಲಿಟ್ಟಿದ್ದು, ರೂ 1000 ಕೋಟಿ. ಆದರೆ, ಬಿಡುಗಡೆ ಮಾಡಿದ್ದು ಕೇವಲ ರೂ 258 ಕೋಟಿ! ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.