ADVERTISEMENT

ಹೊಸದು ಹುಡುಕುವ ಮಗು ಶ್ರೇಷ್ಠ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 18:30 IST
Last Updated 11 ಜುಲೈ 2012, 18:30 IST

ಬೆಂಗಳೂರು:`ಪ್ರತಿಯೊಂದರಲ್ಲೂ ಹೊಸದನ್ನು ಹುಡುಕುವ ಮಗು ಜಗತ್ತಿನ ಶ್ರೇಷ್ಠ ವಿಜ್ಞಾನಿ~ ಎಂದು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್‌ಐಎಎಸ್) ನಿರ್ದೇಶಕ ಡಾ. ಸಿ.ಎಸ್. ರಾಮಮೂರ್ತಿ ಅಭಿಪ್ರಾಯಪಟ್ಟರು.

ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ `ಬ್ರೈನೋಬ್ರೈನ್ ಫೆಸ್ಟ್ 2012 ಗಣಿತ ಉತ್ಸವ~ದಲ್ಲಿ ಅವರು ಮಾತನಾಡಿದರು. `ಪ್ರತಿಯೊಂದು ಮಗುವು ತನ್ನದೇ ಆದ ವಿಶೇಷ ಆಸಕ್ತಿ ಬೆಳೆಸಿಕೊಂಡಿರುತ್ತದೆ. ತನ್ನ ಸುತ್ತಮುತ್ತಲಿನ ಆಗು ಹೋಗುಗಳನ್ನು ನೋಡಿಯೇ ಸಮಾಜವನ್ನು ಅರಿಯುವ ಮಗು ನಿಜಕ್ಕೂ ಜಗತ್ತಿನ ಶ್ರೇಷ್ಠ ವಿಜ್ಞಾನಿ.

ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಹೇಗೆ ಪೋಷಿಸಬೇಕು ಎಂಬುದರ ಬಗ್ಗೆ ನಮ್ಮ ಸಂಸ್ಥೆ ಅಧ್ಯಯನ ನಡೆಸಿ ಯೋಜನೆ ಸಿದ್ಧಪಡಿಸುತ್ತಿದೆ~ ಎಂದು ಅವರು ಹೇಳಿದರು`ಪ್ರಸ್ತುತ ವ್ಯವಸ್ಥೆ ಮಗುವಿನ ಆಸಕ್ತಿಯನ್ನು ಹೊಸಕಿ ಹಾಕುತ್ತಿದೆ.

ಮಗುವಿನ ಮುಂದೆ ಮಾಹಿತಿಗಳ ಮಹಾಪೂರವೇ ಹರಿದು ಬರುತ್ತಿರುವುದರಿಂದ ಯಾವುದನ್ನು ಕಲಿಯಬೇಕು ಎಂಬ ಗೊಂದಲಕ್ಕೆ ಸಿಲುಕುವ ಮಗು, ಪರೀಕ್ಷೆಗೆ ಬೇಕಿರುವಷ್ಟನ್ನು ಮಾತ್ರ ಅಧ್ಯಯನ ಮಾಡುತ್ತಿದೆ~ ಎಂದು ಅವರು ವಿಷಾದಿಸಿದರು.
 
ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಮತ್ತು ಪೋಷಕರೂ ಪಾಲ್ಗೊಂಡಿದ್ದರು. ಬ್ರೈನೋಬ್ರೇನ್ ಸಂಸ್ಥೆಯ ನಿರ್ದೇಶಕ ರಾಮ್ಕಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ರಾಜಾಜಿನಗರ ತಂಡ ಮೊದಲ ಸ್ಥಾನ ಮಡಿಕೇರಿ ತಂಡ 2ನೇ ಸ್ಥಾನ, ನಂತರದ ಸ್ಥಾನಗಳನ್ನು ಗುಬ್ಬಿ ಮತ್ತು ಜೆ.ಪಿ.ನಗರ ತಂಡಗಳು ಪಡೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.