ಬೆಂಗಳೂರು: ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಸಲುವಾಗಿ ಶಾಖೆಗಳನ್ನು ಆಧುನೀಕರಣಗೊಳಿಸುವ ‘ಅನನ್ಯ ಶಾಖೆ’ ಯೋಜನೆಯನ್ನು ಸಿಂಡಿಕೇಟ್ ಬ್ಯಾಂಕ್ ಆರಂಭಿಸಿದೆ.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಶ್ರೀವಾಸ್ತವ್ ಅವರು ಬ್ಯಾಂಕಿನ ಇಂದಿರಾನಗರ ಶಾಖೆಯಲ್ಲಿ ಗುರುವಾರ ಈ ಯೋಜನೆಗೆ ಚಾಲನೆ ನೀಡಿದರು.
‘ಶೂಲೆ, ವಿ.ವಿ.ಪುರ, ಶೇಷಾದ್ರಿಪುರ ಶಾಖೆಗಳನ್ನು ಅನನ್ಯ ಯೋಜನೆಯಡಿ ಆಧುನೀಕರಣಗೊಳಿಸಲಾಗಿದೆ. ಬ್ಯಾಂಕ್ ಇನ್ನು 6 ತಿಂಗಳುಗಳಲ್ಲಿ ಶೇಕಡಾ 10ರಷ್ಟು ಶಾಖೆಗಳನ್ನು ಈ ಯೋಜನೆ ಅಡಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ಡಿಜಿಟಲ್ ತಂತ್ರಜ್ಞಾನದ ವಿವಿಧ ಸೌಲಭ್ಯಗಳನ್ನು ಹೊಂದಿರುವ ಈ ಶಾಖೆಗಳಲ್ಲಿ ತ್ವರಿತವಾಗಿ ಖಾತೆ ಆರಂಭಿಸುವ ಸೇವೆಯೂ ಲಭ್ಯ’ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಅತುಲ್ ಕುಮಾರ್ ತಿಳಿಸಿದರು. ಪ್ರಧಾನ ವ್ಯವಸ್ಥಾಪಕ ಕೆ.ಟಿ.ರೈ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.