ADVERTISEMENT

‘ಮಹಿಳಾ ಉದ್ಯಮಿಗಳ ಮಾಹಿತಿ ಇಲ್ಲ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2015, 19:51 IST
Last Updated 6 ಜೂನ್ 2015, 19:51 IST
ಕಾರ್ಯಕ್ರಮದಲ್ಲಿ (ಎಡದಿಂದ ಕುಳಿತವರು) ವೀಣಾ ವಿ.ಕುಲಕರ್ಣಿ, ಛಾಯಾ ನಂಜಪ್ಪ, ಮಮತಾ ವಿಶ್ವನಾಥ್ ಲಾಡ್ವಾ, ರೋಹಿಣಿ ಮತ್ತು ಸುವರ್ಣ ಎಲ್. ಮುಕ್ಕಾವರ್ ಅವರಿಗೆ ‘ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. (ಎಡದಿಂದ ನಿಂತವರಲ್ಲಿ ಎರಡನೆಯವರು) ಮಹಿಳಾ ಉದ್ಯಮಿ ಅಭಿವೃದ್ಧಿ ನಿಗಮದ ಸದಸ್ಯೆ ರೇಖಾ ಮಾವಿನಕೆರೆ, ಉಪಾಧ್ಯಕ್ಷೆ ಲಲನ್ ಎಸ್ ಸನೇಡ್, ಅವೇಕ್ ಸಂಸ್ಥಾಪಕಾ ಅಧ್ಯಕ್ಷೆ ಮಧುರಾ ಛತ್ರಪತಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವಾಸಂತಿ ಶಿವಣ್ಣ, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ನಂದಿನಿ ರೋಡ್ರಿಕ್ಸ್. ಕಾಸಿಯಾ ಅಧ್ಯಕ್ಷ ಸಿ.ಎಂ. ರಾಜಮಾನೆ ಮತ್ತಿತರರು ಚಿತ್ರದಲ್ಲಿದ್ದಾರೆ  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಭಾರತದಲ್ಲಿರುವ ಮಹಿಳಾ ಉದ್ಯಮಿಗಳ ಕುರಿತು ಸಂಪೂರ್ಣ ಮಾಹಿತಿ ಸರ್ಕಾರದ ಯಾವ ಇಲಾಖೆಯಲ್ಲೂ ಲಭ್ಯವಿಲ್ಲ’ ಎಂದು ಅವೇಕ್ ಸಂಸ್ಥೆಯ ಅಧ್ಯಕ್ಷೆ ಮಧುರಾ ಛತ್ರಪತಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಶನಿವಾರ ಏರ್ಪಡಿಸಿದ್ದ ‘ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿರುವ ಮಹಿಳಾ ಉದ್ಯಮಿಗಳ ಸಂಖ್ಯೆ, ಮಹಿಳೆಯರು  ಯಾವ ಸ್ವರೂಪದ ಉದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಆರ್ಥಿಕ ಅಭಿವೃದ್ಧಿಯಲ್ಲಿ ಅವರ ಪಾತ್ರವೇನು ಎಂಬುದರ ಸಮಗ್ರ ಮಾಹಿತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವ ಇಲಾಖೆ ಹಾಗೂ ಸಂಸ್ಥೆಗಳಲ್ಲೂ ಲಭ್ಯವಿಲ್ಲ’ ಎಂದರು.

‘ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳ ಯಾವ ವಲಯಗಳಲ್ಲಿ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿ ಅತ್ಯಗತ್ಯ. ಇಂತಹ ಮಾಹಿತಿಯನ್ನು ಒಂದೆಡೆ ಕಲೆ ಹಾಕುವಂತೆ ಕಳೆದ 20 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು 19  ಇಲಾಖೆಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಆ ಕೆಲಸ ಆಗಿಲ್ಲ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವಾಸಂತಿ ಶಿವಣ್ಣ  ಅವರು ಮಾತನಾಡಿ, ‘ಕೈಗಾರಿಕೆ ಮತ್ತು ಉದ್ಯಮಗಳನ್ನು ಆರಂಭಿಸುವಲ್ಲಿ ಮಹಿಳೆಯರು ಮುಂದಿದ್ದಾರೆ. ಆದರೆ ತಮ್ಮ ಉದ್ಯಮದ ಉತ್ಪನ್ನಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಎಂಬ ಮಾರುಕಟ್ಟೆ ತಂತ್ರ ಬಹುತೇಕ ಮಹಿಳಾ ಉದ್ಯಮಿಗಳಿಗಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ತರಬೇತಿ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.