ADVERTISEMENT

‘ಸಂಶೋಧನಾ ಕ್ಷೇತ್ರದಲ್ಲಿ ಆಳ ಅಧ್ಯಯನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:31 IST
Last Updated 24 ಸೆಪ್ಟೆಂಬರ್ 2013, 20:31 IST
ಕರ್ನಾಟಕ ಇತಿಹಾಸ ಅಕಾಡೆಮಿಯು ಮಂಗಳವಾರ ನಗರದ ದಿ ಮಿಥಿಕ್‌ ಸೊಸೈಟಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪುರಾತತ್ವ ಶಾಸ್ತ್ರಜ್ಞ ಪ್ರೊ.ಅ.ಸುಂದರ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಕೆ.ಜೋಷಿ, ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜು ಉಪನ್ಯಾಸಕ ಡಾ.ಬಾಲಕೃಷ್ಣ ಹೆಗಡೆ ಮತ್ತಿತರರು ಚಿತ್ರದಲ್ಲಿದ್ದಾರೆ.

ಬೆಂಗಳೂರು: ‘ಯುವ ಇತಿಹಾಸ ಸಂಶೋಧಕರು ಸಂಶೋಧನಾ ಕಾರ್ಯ ಕೈಗೊಳ್ಳುವ ಮುನ್ನ ಆಯಾ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡುವುದು ಅಗತ್ಯ’ ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಪ್ರೊ.ಅ.ಸುಂದರ ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯು ಮಂಗಳವಾರ ನಗರದ ದಿ ಮಿಥಿಕ್‌ ಸೊಸೈಟಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಇತಹಾಸ ಬಲ್ಲ ಯುವಕರ ಸಂಖ್ಯೆ ಕಡಿಮೆಯಿದೆ. ಇಂದಿನ ಬಹುತೇಕ ಯುವಪೀಳಿಗೆಗೆ ದೇಶದ ಬಗೆಗೆ ಅಭಿಮಾನ, ಸ್ತ್ರೀಯರ ಬಗೆಗೆ ಗೌರವ ಇಲ್ಲದಂತಾಗಿದೆ. ಇತಿಹಾಸ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಶೋಧಕರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.

‘ಈಗ ನಮಗೆ ದೇಶದ ಸಂಪೂರ್ಣ ಇತಿಹಾಸ ತಿಳಿದಿಲ್ಲ. ತಿಳಿದಿರುವುದು ಶೇ 20 ರಿಂದ 25 ರಷ್ಟು ಇತಿಹಾಸ ಮಾತ್ರ. ಅದರಲ್ಲೂ ಹಲವಾರು ದೋಷಗಳಿವೆ. ಕಂಡುಹಿಡಿದ ಇತಿಹಾಸದಲ್ಲಿ ಭಾರತೀಯ ಆತ್ಮ ದರ್ಶನವಾಗುವುದಿಲ್ಲ. ಇದರಿಂದ ದೇಶದ ನಿಜವಾದ ಇತಿಹಾಸ ರಚನೆಯಾಗಬೇಕು’ ಎಂದರು.

ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ.ನಾಗರಾಜ ಮಾತನಾಡಿ, ‘ಆಧುನಿಕ ವಿಜ್ಞಾನ-ತಂತ್ರಜ್ಞಾನದ ಉಪಯೋಗದಿಂದ ಪುರಾತತ್ವ ಸಂಶೋಧನೆಯತ್ತ ಗಮನ ಹರಿಸಬೇಕು. ಕರ್ನಾಟಕದ ಇತಿಹಾಸ ಅಧ್ಯಯನ­ದಲ್ಲೂ ಇದರ ಅಳವಡಿಕೆ ಅಗತ್ಯ. ಸಮಾಜದಲ್ಲಿ ಸಾಮರಸ್ಯ ತರುವ ಜವಾಬ್ದಾರಿ ಇತಿಹಾಸಕಾರರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.