ADVERTISEMENT

‘ಹಿರಿಯರ ಕಾಳಜಿ, ಯುವಕರ ಕರ್ತವ್ಯ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST
ಹೆಲ್ಪ್‌ ಏಜ್‌ ಇಂಡಿಯಾ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ಸೇವಾಕಾರ್ಯ ವಿಭಾಗವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ‘ದಿ ಜರ್ನಿ ಆಫ್‌ ಹೆಲ್ಪ್‌ ಏಜ್‌ ಇಂಡಿಯಾ’ ಪುಸ್ತಕವನ್ನು ಬಿಡುಗಡೆಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಪ್ರತಿಯನ್ನು ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರ ಕುಮಾರ್‌ ಅವರಿಗೆ ನೀಡಿದರು. ಹೆಲ್ಪ್‌ ಏಜ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ರೇಖಾ ಮೂರ್ತಿ, ವೈದ್ಯ ಡಾ.ಕೆ.ಎಸ್‌.ಸತ್ಯಪ್ರಸಾದ್‌, ಸಿಬಿಆರ್‌ ನೆಟ್‌ವರ್ಕ್‌ನ ಪ್ರಾದೇಶಿಕ ಸಲಹೆಗಾರ್ತಿ ಇಂದುಮತಿ ರಾವ್‌ ಚಿತ್ರದಲ್ಲಿದ್ದಾರೆ	– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಹಿರಿಯರ ಯೋಗಕ್ಷೇಮ ಮತ್ತು ಅವರ ಕಾಳಜಿ­ಯನ್ನು ವಹಿಸು­ವುದು ಯುವಕರ ಕರ್ತವ್ಯ­ವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.ಎಸ್‌.­ದೊರೆಸ್ವಾಮಿ ಹೇಳಿದರು.

ಹೆಲ್ಪ್‌ ಏಜ್‌ ಇಂಡಿಯಾ ಮತ್ತು ಬೆಂಗಳೂರು ವಿಶ್ವ­ವಿದ್ಯಾಲಯದ ಸಮಾಜ ಸೇವಾಕಾರ್ಯ ವಿಭಾ­ಗವು ಸೆಂಟ್ರಲ್‌ ಕಾಲೇಜಿನಲ್ಲಿ ಮಂಗಳವಾರ ಆಯೋ­ಜಿಸಿದ್ದ ‘ಹಗ್’ ಅಭಿಯಾನಕ್ಕೆ ಚಾಲನೆ ಮತ್ತು ‘ದಿ ಜರ್ನಿ ಆಫ್‌ ಹೆಲ್ಪ್‌ ಏಜ್‌ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮಕ್ಕಳನ್ನು ಪ್ರೀತಿಯಿಂದ ಸಾಕಿ, ಸಲುಹಿ, ವಿದ್ಯಾ­ಭ್ಯಾಸ ನೀಡಿದ ಪೋಷ­ಕರು ತಮ್ಮ ಕೊನೆ­ಗಾಲ­ದಲ್ಲಿ ಏಕಾಂ­ಗಿ­ಯಾಗಿ ಜೀವನ ನಡೆಸ­ಬೇಕಾ­ಗಿದೆ. ಮಕ್ಕಳು ರೆಕ್ಕೆ ಬಲಿತ ಹಕ್ಕಿಗಳಂತೆ ತಮ್ಮ ಭವಿಷ್ಯವನ್ನು ಅರಸಿಕೊಂಡು ವಿದೇಶ­ಗಳಿಗೆ ಹೋಗಿ ನೆಲೆಸುತ್ತಾರೆ. ದೇಶದಲ್ಲಿ ಹಿರಿಯರ ಪರಿಸ್ಥಿತಿ ಶೋಚನೀಯ­ವಾಗಿದೆ’ ಎಂದು ವಿಷಾದಿಸಿದರು.

‘ಮಕ್ಕಳು ತಮ್ಮ ಹಿರಿಯರ ಕುರಿತು ವಹಿಸಬೇಕಾದ ಕಾಳಜಿಯನ್ನು ಇಂದು ಸ್ವಯಂ ಸೇವಾ ಸಂಸ್ಥೆಗಳು ನಿರ್ವ­ಹಿ­ಸುತ್ತಿವೆ. ಸಮಾಜದ ಸಂಸ್ಕೃತಿಯೇ ಒಡೆದುಹೋಗುತ್ತಿದೆ. ಸಮಾಜವು ಇಂದು ಅಶಾಂತಿಯ ಬೀಡಾಗಿದೆ. ಎಲ್ಲ ಮಕ್ಕಳು ತಮ್ಮ ಕರ್ತವ್ಯಗಳನ್ನು ಅರಿತು ನಡೆ­ಯಬೇಕು. ಕೊನೆಗಾಲದಲ್ಲಿ ಹಿರಿಯ­­ರನ್ನು ಪ್ರೀತಿ­ಯಿಂದ ನಡೆಸಿ­ಕೊಳ್ಳ­ಬೇಕು’ ಎಂದರು. ಸಿಬಿಆರ್‌ ನೆಟ್‌ವರ್ಕ್‌ನ `ಪ್ರಾದೇಶಿಕ ಸಲಹೆಗಾರ್ತಿ ಇಂದುಮತಿ ರಾವ್‌ ಮಾತನಾಡಿ, ‘ಸರ್ಕಾರವು ಅಭಿವೃದ್ಧಿ ಬಜೆಟ್‌ನಲ್ಲಿ ಶೇ 10 ರಷ್ಟು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ
ಮೀಸ­ಲಿಡಬೇಕು’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾ­ಯಿತಿ ಮತ್ತು ನಗರ ಪ್ರದೇಶ­ಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಹಿರಿಯ ನಾಗರಿಕರ ಸಂಪೂರ್ಣ ಮಾಹಿತಿ­ಯೊಂ­ದಿಗೆ ನೋಂದಣಿ ಮಾಡ­ಬೇಕು. ಇದ­ರಿಂದ, ಹಿರಿಯ ನಾಗರಿಕರ ಸಂಖ್ಯಾ ಪ್ರಮಾಣ ತಿಳಿಯುತ್ತದೆ’ ಎಂದರು.‘ಇದುವರೆಗೂ ನಮ್ಮ ದೇಶದಲ್ಲಿನ ಹಿರಿ­ಯರ ಪ್ರಮಾಣದ ಕುರಿತು ಯಾವುದೇ ದತ್ತಾಂಶಗಳು ಪ್ರಕಟಣೆ­ಯಾಗಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.