ADVERTISEMENT

‘ಹೊಸಕೋಟೆ– ಹಾಲು ಪ್ಯಾಕಿಂಗ್‌ ಘಟಕ ಶೀಘ್ರ ಆರಂಭ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಹೊಸಕೋಟೆ:  ‘ಬೆಂಗಳೂರು ಹಾಲು ಒಕ್ಕೂಟ ಹೊಸ ಕೋಟೆ ಬಳಿ ಸ್ಥಾಪಿಸಿರುವ ಹಾಲು ಪ್ಯಾಕಿಂಗ್‌ ಘಟಕ ಮಾರ್ಚ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್‌ ಹೇಳಿದರು.

ಹೊಸಕೋಟೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪಶು ಮೇವಿಗೆ ಹೆಚ್ಚಿನ ಬೇಡಿಕೆ­ಯಿದ್ದು  ಕೆಎಂಎಫ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ಅದು ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಒಕ್ಕೂಟ ತನ್ನದೇ ಆದ ಪಶು ಮೇವು ಘಟಕವನ್ನು ವಿಜಯ­ಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ’ ಎಂದು ಹೇಳಿದರು.

  ಈ ಸಂದರ್ಭ­ದಲ್ಲಿ ತಾಲ್ಲೂಕಿನ ಕಲ್ಲಹಳ್ಳಿ, ಮುತ್ಸಂದ್ರ ಹಾಗು ಚೊಕ್ಕಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ  ತಾಲ್ಲೂಕಿನ ಅತ್ಯುತ್ತಮ ಸಹಕಾರ ಸಂಘಗಳೆಂಬ ಪ್ರಶಸ್ತಿ ನೀಡಲಾಯಿತು.  ದಿನಕ್ಕೆ 175 ಲೀಟರ್‌ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮುತ್ಸಂದ್ರ ಹಾಲು ಉತ್ಪಾದಕರ ಸಂಘದ ಜ್ಯೋತಿ ಅವರಿಗೆ ಹೆಚ್ಚು ಹಾಲು ಉತ್ಪಾದನೆ ಪ್ರಶಸ್ತಿ, ದಾಸರ­ಹಳ್ಳಿಯ ನಾಗೇಂದ್ರ ಅವರಿಗೆ ಅತ್ಯುತ್ತಮ ಗುಂಪು ಕೃತಕ ಗರ್ಭ­ಧಾರಣೆ, ಲಕ್ಕೊಂಡ­ಹಳ್ಳಿಯ ಶ್ರೀನಿವಾಸ್‌ ಅವರಿಗೆ ಅತ್ಯುತ್ತಮ ಒಂಟಿ ಕೃತಕ ಗರ್ಭಧಾರಣೆ ಪ್ರಶಸ್ತಿ ನೀಡಿ ಗೌರವಿಸ­ಲಾಯಿತು.

ಒಕೂ್ಕಟದ ಕಲ್ಯಾಣ ಟ್ರಸ್ಟ್ ವತಿಯಿಂದ ಫಲಾನು­ಭವಿಗಳಿಗೆ ಹಾಗೂ ಜನಶ್ರೀ ಬಿಮಾ ಯೋಜನೆ ಅಡಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಚೆಕ್‌ ವಿತರಿಸಲಾಯಿತು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ, ಪ್ರಧಾನ ವ್ಯವ­ಸ್ಥಾಪಕ ಡಾ.ಕೃಷ್ಣಾರೆಡ್ಡಿ, ನಿರ್ದೇಶಕ ರಾದ ಮುನಿಸುಬ್ಬಯ್ಯ, ಜಯಣ್ಣ,­ಡಾ.ಸಿ.ಕೆ.ರಾಘವನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.