ADVERTISEMENT

ತಲಘಟ್ಟಪುರ ಕಾವಲಿಗೆ 101 ಸಿ.ಸಿ.ಟಿ.ವಿ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 0:35 IST
Last Updated 28 ಜನವರಿ 2024, 0:35 IST
ಸಿಸಿ ಟಿ.ವಿ ಕ್ಯಾಮೆರಾಗಳ ನಿರ್ವಹಣೆಯ ಕಮಾಂಡ್ ಕೇಂದ್ರವನ್ನು ಕಮಿಷನರ್ ಬಿ.ದಯಾನಂದ್ ಅವರು ಶನಿವಾರ ಉದ್ಘಾಟಿಸಿದರು
ಸಿಸಿ ಟಿ.ವಿ ಕ್ಯಾಮೆರಾಗಳ ನಿರ್ವಹಣೆಯ ಕಮಾಂಡ್ ಕೇಂದ್ರವನ್ನು ಕಮಿಷನರ್ ಬಿ.ದಯಾನಂದ್ ಅವರು ಶನಿವಾರ ಉದ್ಘಾಟಿಸಿದರು   

ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಗಾ ವಹಿಸಲು 101 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವುಗಳ ನಿರ್ವಹಣೆಯ ಕಮಾಂಡ್ ಕೇಂದ್ರವನ್ನು ಕಮಿಷನರ್ ಬಿ.ದಯಾನಂದ್ ಅವರು ಶನಿವಾರ ಉದ್ಘಾಟಿಸಿದರು.

ಚೇಂಜ್‌ ಮೇಕರ್ಸ್‌ ಆಫ್ ಕನಕಪುರ ಅಸೋಸಿಯೇಷನ್ (ಸಿಎಂಕೆಆರ್‌ಎ) ಸಹಯೋಗದೊಂದಿಗೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಅಸೋಸಿಯೇಷನ್ ನೇಮಕ ಮಾಡಿರುವ ಸಿಬ್ಬಂದಿ ಕ್ಯಾಮೆರಾ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದಾರೆ.

ತಂತಿರಹಿತ ಕ್ಯಾಮೆರಾಗಳು ಇವಾಗಿದ್ದು, ಪ್ರತಿಯೊಂದು ಕ್ಯಾಮೆರಾ ಬಳಿಯೇ ಧ್ವನಿವರ್ಧಕ ಅಳವಡಿಸಲಾಗಿದೆ. ಕಮಾಂಡ್ ಕೇಂದ್ರದಲ್ಲಿರುವ ಸಿಬ್ಬಂದಿ, ದೃಶ್ಯಗಳನ್ನು ನೋಡಿ ಧ್ವನಿವರ್ಧಕ ಮೂಲಕ ಸೂಚನೆ ನೀಡಲು ಅವಕಾಶವಿದೆ.

ADVERTISEMENT

‘ಪೊಲೀಸರು ಎಲ್ಲ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅಪರಾಧಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ದಯಾನಂದ್ ಹೇಳಿದರು.

ಸಿಎಂಕೆಆರ್‌ಎ ಕಾರ್ಯದರ್ಶಿ ವಿ.ಕೆ.ವತ್ಸ, ‘ಜನರ ಸುರಕ್ಷತೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಕ್ಯಾಮೆರಾಗಳನ್ನು ಅಳವಡಿಸುವ ಯೋಚನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.