ADVERTISEMENT

ಇಸ್ರೊದಲ್ಲಿ ಕೆಲಸ ಕೊಡಿಸುವುದಾಗಿ ₹1.3 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:46 IST
Last Updated 7 ಮೇ 2025, 14:46 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ಗ್ರಾಫಿಕ್‌ ಡಿಸೈನರ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನೊಬ್ಬನಿಗೆ ₹1.3 ಕೋಟಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಯ ಆರೋಪದ ಮೇಲೆ ಲಗ್ಗೆರೆಯ ಪಿ. ಪ್ರಭಾಕರ್ ಹಾಗೂ ಅವರ ಪತ್ನಿ ವಿನುತಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು ತಿಳಿಸಿದರು.

ADVERTISEMENT

‘ಪ್ರಭಾಕರ್‌ ಹಾಗೂ ವಿನುತಾ ಅವರು 2024ರ ಅಗಸ್ಟ್‌ನಲ್ಲಿ ದೂರುದಾರರ ಮನೆಗೆ ತೆರಳಿ, ಇಸ್ರೊ ಸಂಸ್ಥೆಯಲ್ಲಿ ಗ್ರಾಫಿಕ್‌ ಡಿಸೈನರ್‌ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ನಂತರ ದೂರುದಾರರಿಂದ ₹ 37 ಲಕ್ಷ ಪಡೆದು ನೇಮಕಾತಿ ಪತ್ರ ಬರಲಿದೆ ಎಂದು ತಿಳಿಸಿದ್ದರು. ಆದರೆ ಅಕ್ಟೋಬರ್‌ ತಿಂಗಳು ಕಳೆದರೂ ನೇಮಕಾತಿ ಪತ್ರ ಬಾರದ ಕಾಣ, ದೂರದಾರರು ಆರೋಪಿಗಳನ್ನು ಕೇಳಿದರು. ಆಗ ಆರೋಪಿಗಳು ಇನ್ನೂ ₹23 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘₹23 ಲಕ್ಷ ನೀಡದಿದ್ದರೆ ನಿಮಗೆ ಕೆಲಸವೂ ಸಿಗುವುದಿಲ್ಲ, ನೀವು ಹಿಂದೆ ನೀಡಿದ್ದ ₹37 ಲಕ್ಷವೂ ಸಿಗುವುದಿಲ್ಲವೆಂದು ಆರೋಪಿಗಳು ಬ್ಲಾಕ್‌ಮೇಲ್‌ ಮಾಡಿದ್ದರು. ₹23 ಲಕ್ಷ ನೀಡಲು ಒಪ್ಪಿದ ದೂರುದಾರರನ್ನು ಆರೋಪಿಗಳು ಇಸ್ರೊ ಸಂಸ್ಥೆಗೆ ಕರೆದುಕೊಂಡು ಹೋಗಿದ್ದರು. ಇಸ್ರೊ ಸಂಸ್ಥೆಯಲ್ಲಿದ್ದ ಸುಪ್ರತೊ ಪಾಥೊ, ರೆಡ್ಡಪ್ಪ, ರಾಜೇಂದ್ರ, ಎ.ಕೆ. ರಾಜೇಂದ್ರ ಅವರಿಗೆ ₹23 ಲಕ್ಷ ನೀಡುವಂತೆ ತಿಳಿಸಿದ್ದರು. ಇದೇ ರೀತಿ ನನಗೆ ಇಲ್ಲಿಯವೆರೆಗೆ ಒಟ್ಟು ₹1.3 ಕೋಟಿ ಪಡೆದು ವಂಚನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದರು.

‘ಆರೋಪಿಗಳು ಇಸ್ರೊ ಸಂಸ್ಥೆಯ ನಕಲಿ ನೇಮಕಾತಿ ಪತ್ರ ಮತ್ತಿತರ ದಾಖಲೆಗಳನ್ನು ನೀಡಿದ್ದಾರೆ. ಆದರೆ, ನನಗೆ ಯಾವುದೇ ರೀತಿಯ ಕೆಲಸವನ್ನೂ ಕೊಡಿಸಿಲ್ಲ. ಆದ್ದರಿಂದ ಪ್ರಭಾಕರ್, ವಿನುತಾ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪ್ರಕರಣ ದಾಖಲಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.