ಸಾಂದರ್ಭಿಕ ಚಿತ್ರ
ಬೆಂಗಳೂರು: ಔಷಧಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮೇ ತಿಂಗಳಲ್ಲಿ ರಾಜ್ಯದ ವಿವಿಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ವಿವಿಧ ಔಷಧಗಳ 15 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲದಿರುವುದು ದೃಢಪಟ್ಟಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ ಐ.ಪಿ., ಪೋಮೋಲ್–650, ಮಿಟು ಕ್ಯೂ7 ಸಿರಪ್, ಸ್ಟೈರೆಲ್ ಡಿಲ್ಯೂಯಂಟ್ ಫಾರ್ ರೆಕಾನೋಸ್ಟಿಟಿಶ್ಯೂನ್ ಆಫ್ ಎನ್‌ಡಿ, ಸ್ಪಾನ್‌ಪ್ಲಾಕ್ಸ್–ಓಡ್ ಟ್ಯಾಬ್ಲೆಟ್ಸ್, ಪ್ಯಾಂಟೊಕೋಟ್–ಡಿಎಸ್‌ಆರ್, ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ ಐ.ಪಿ., ಆಲ್ಪಾ ಲಿಪೋಯಿಕ್ ಆ್ಯಸಿಡ್, ಪಿರಾಸಿಡ್–ಓ ಸನ್‌ಪೆನ್‌ಶನ್, ಗ್ಲಿಮಿಜ್–2, ಐರನ್ ಸುಕ್ರೋಸ್ ಇಂಜೆಕ್ಷನ್‌ನ ಔಷಧದ ನಿಗದಿತ ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಉಪ ಔಷಧ ನಿಯಂತ್ರಕ ಬಿ.ಪಿ. ಅರುಣ್ ತಿಳಿಸಿದ್ದಾರೆ.
ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡಬಾರದು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.