ADVERTISEMENT

'2.0' ದೃಶ್ಯಗಳ ಅಪ್‌ಲೋಡ್‌: ದೂರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 18:43 IST
Last Updated 3 ಡಿಸೆಂಬರ್ 2018, 18:43 IST

ಬೆಂಗಳೂರು: ‘ನಟ ರಜನಿಕಾಂತ್‌ ಅಭಿನಯದ ‘2.0’ ಸಿನಿಮಾ ದೃಶ್ಯಗಳನ್ನು ಕೆಲವು ಕಿಡಿಗೇಡಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ‘ ಎಂದು ಆರೋಪಿಸಿ ‘ಕರ್ನಾಟಕದ ರಜನಿಕಾಂತ್ ಅಭಿಮಾನಿಗಳ ಒಕ್ಕೂಟ’ ಪದಾಧಿಕಾರಿಗಳು, ನಗರ ಪೊಲೀಸ್‌ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರಿಗೆ ಸೋಮವಾರ ದೂರು ನೀಡಿದ್ದಾರೆ.

‘2.0 ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆ ಆಗಿದೆ. ಕಿಡಿಗೇಡಿಗಳು, ಚಿತ್ರಮಂದಿರಗಳಲ್ಲಿ ಸಿನಿಮಾ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದೇ ದೃಶ್ಯಗಳನ್ನು ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

‘ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌ ಅವರಿಗೂ ವ್ಯಕ್ತಿಯೊಬ್ಬ ಸಿನಿಮಾದ ದೃಶ್ಯಗಳನ್ನು ಕಳುಹಿಸಿದ್ದಾನೆ. ಆ ಬಗ್ಗೆ ಭಾಸ್ಕರ್‌ ರಾವ್‌ ಅವರೇ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ, ದೃಶ್ಯ ಹರಿಬಿಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.