ADVERTISEMENT

₹28 ಲಕ್ಷ ನಷ್ಟ: ನಟ ಯಶ್ ತಾಯಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:59 IST
Last Updated 12 ಜೂನ್ 2019, 19:59 IST
ಯಶ್‌
ಯಶ್‌   

ಬೆಂಗಳೂರು: ಬಾಡಿಗೆ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ನಾಶಪಡಿಸಿ ಮಾಲೀಕರಿಗೆ ನಷ್ಟ ಉಂಟು ಮಾಡಿದ ಆರೋಪದಡಿ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ಇತರರ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.‌

ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್‌ನ 5ನೇ ಕ್ರಾಸ್‌ನಲ್ಲಿ ವಾಸವಿದ್ದ ಬಾಡಿಗೆ ಮನೆಯನ್ನು ಪುಷ್ಪಾ ಅವರು ಇತ್ತೀಚೆಗಷ್ಟೇ ಖಾಲಿ ಮಾಡಿದ್ದರು. ‘ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿಮನೆಯ ಕೆಲ ಭಾಗಗಳಿಗೆ ಧಕ್ಕೆ ಉಂಟು ಮಾಡಿ ಆಸ್ತಿಗೆ ನಷ್ಟವನ್ನುಂಟು ಮಾಡಿದ್ದಾರೆ’ ಎಂದು ಆರೋಪಿಸಿ ಮನೆಯ ಒಡತಿಡಾ. ವನಜಾ ಅವರು ಠಾಣೆಗೆ ದೂರು ನೀಡಿದ್ದರು.

ದೂರು ಆಧರಿಸಿ ಪೊಲೀಸರು, ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ‘ಎಫ್‌ಐಆರ್ ದಾಖಲಿಸಿಕೊಂಡುತನಿಖೆ ನಡೆಸಿ’ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು. ಅದರನ್ವಯ ಸಾರ್ವಜನಿಕರ
ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪದಡಿ (ಐಪಿಸಿ 427) ಎಫ್‌ಐಆರ್ ದಾಖಲಾಗಿದೆ.

ADVERTISEMENT

ದೂರಿನಲ್ಲಿ ಏನಿದೆ: ‘ನಮ್ಮ ಮನೆಯನ್ನು ಪುಷ್ಪಾ ಅವರಿಗೆ 2010ರಲ್ಲಿ ಬಾಡಿಗೆಗೆಕೊಡಲಾಗಿತ್ತು. ಸರಿಯಾಗಿ ಬಾಡಿಗೆ
ನೀಡದೇ ಇದ್ದುದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಮನೆ ಖಾಲಿ ಮಾಡಿಸಲಾಗಿದೆ. ಮನೆ ಖಾಲಿಮಾಡುವಾಗ ಎಲೆಕ್ಟ್ರಿಕ್ ವಸ್ತುಗಳು, ಬಾಗಿಲುಗಳು, ಫ್ಯಾನ್‌ಗಳು, ಕಮೋಡ್ಸ್ಸೇರಿ ಹಲವು ವಸ್ತುಗಳನ್ನುಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ. ಇದರಿಂದ ₹ 28 ಲಕ್ಷದಷ್ಟು ನಷ್ಟವಾಗಿದೆ’ ಎಂದು ವನಜಾ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.