ADVERTISEMENT

ಬೆಂಗಳೂರಿನಲ್ಲಿ ಮೂವರಿಗೆ ರೂಪಾಂತರ ಕೊರೊನಾ ಸೋಂಕು ದೃಢ 

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 5:41 IST
Last Updated 29 ಡಿಸೆಂಬರ್ 2020, 5:41 IST
   

ಬೆಂಗಳೂರು: ಇಂಗ್ಲೆಂಡ್ ನಿಂದ ನಗರಕ್ಕೆ ಬಂದಿರುವವರ ಪೈಕಿ ಮೂವರಿಗೆ ಬ್ರಿಟನ್‌ ರೂಪಾಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದೆ. ಬೆಂಗಳೂರಿನ ಮೂವರಿಗೆ ಹೊಸ ಸೋಂಕು ತಗುಲಿರುವುದು ನಿಮ್ಹಾನ್ಸ್ ನಲ್ಲಿ ನಡೆದ ವಂಶವಾಹಿ ಪರೀಕ್ಷೆ ವೇಳೆ ದೃಢಪಟ್ಟಿದೆ. ಈ ಪ್ರಯಾಣಿಕರನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಇಂಗ್ಲೆಂಡ್ ನಿಂದ ಬಂದ 2,127 ಪ್ರಯಾಣಿಕರ ಪೈಕಿ 1,766 ಮಂದಿಯನ್ನು ಪತ್ತೆಮಾಡಿ ಪರೀಕ್ಷೆಗೊಳಪಡಿಸಲಾಗಿತ್ತು. 27 ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಈ ಪೈಕಿ 15 ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಇದ್ದಾರೆ. ಇವರಿಗೆ ತಗುಲಿರುವುದು ಬ್ರಿಟನ್ ರೂಪಾಂತರವೇ ಎಂಬುದನ್ನು ತಿಳಿಯಲು ನಿಮ್ಹಾನ್ಸ್ ನಲ್ಲಿ ವಂಶವಾಹಿ ಪರೀಕ್ಷೆ ನಡೆಯುತ್ತಿದೆ.

ಇಂಗ್ಲೆಂಡ್‌ನಿಂದ ಬಂದು, ಕೋವಿಡ್‌ಗೆ ತುತ್ತಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 36 ಜನರನ್ನು ಬಿಬಿಎಂಪಿ ಗುರುತಿಸಿದೆ. ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

'ಬಹುತೇಕ ಕೋವಿಡ್ ಲಕ್ಷಣಗಳೇ ಈ ಸೋಂಕು‌ ತಗುಲಿದವರಲ್ಲಿಯೂ ಕಂಡು ಬರುತ್ತದೆ. ಆದರೆ, ಕೊರೊನಾಗಿಂತ ಈ ಸೋಂಕು ಹರಡುವ ವೇಗ ತೀವ್ರವಾಗಿರುತ್ತದೆ. ಕೋವಿಡ್ ತಡೆಯಲು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆಯೋ ಅವುಗಳನ್ನೇ ಮುಂದುವರಿಸಬೇಕು' ಎಂದು ವೈದ್ಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.