ADVERTISEMENT

500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:10 IST
Last Updated 8 ಏಪ್ರಿಲ್ 2012, 19:10 IST

ಬೆಂಗಳೂರು: ನಗರದ ಬಿಲ್ಲವ ಅಸೋಸಿಯೇಷನ್ ವತಿಯಿಂದ 7ನೇ ವರ್ಷದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಭಾನುವಾರ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿಯ ಮಾಜಿ ಸದಸ್ಯ ಕೆ.ಎಸ್.ದುಶ್ಯಂತ್, `ಬಿಲ್ಲವ ಅಸೋಸಿಯೇಷನ್ ಉಚಿತವಾಗಿ ಜನರಿಗೆ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಇನ್ನು ಮುಂದೆಯೂ ಸೇವೆಯನ್ನು ಮುಂದುವರೆಸಿಕೊಂಡು ಬೆಳೆಸುವಂತಾಗಲಿ~ ಎಂದು ಆಶಿಸಿದರು.

ಡಾ. ಪುರುಷೋತ್ತಮ್ ಮಾತನಾಡಿ, `ಸ್ಥಳೀಯ ಬಡ ಜನರಿಗೋಸ್ಕರ 6 ವರ್ಷಗಳಿಂದ ಈ ಕಾರ್ಯಕ್ರಮವನ್ನು ಸಂಘವು ನಡೆಸಿಕೊಂಡು ಬರುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ~ ಎಂದರು.

`ಸಂಘದ ವತಿಯಿಂದ ಉಚಿತ ಆರೋಗ್ಯ ಸೇವೆ, ವಿದ್ಯಾರ್ಥಿವೇತನ, ಉಚಿತ ಊಟ ಹಾಗೂ ವಸತಿಯ ವಿದ್ಯಾರ್ಥಿನಿಲಯ ಮುಂತಾದ ಸೇವಾ ಕಾರ್ಯಗಳನ್ನು ಸಂಘವು ಯಶಸ್ವಿಯಾಗಿ ಕೈಗೊಂಡಿದೆ~ ಎಂದು ಅವರು ಹೇಳಿದರು.

ಸಂಘದ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, `ಸಂಘವು ನಡೆಸಿಕೊಂಡು ಬರುತ್ತಿರುವ ಎಲ್ಲ ಕಾರ್ಯಗಳಿಗೂ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಉಚಿತ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ, ಸುತ್ತ ಮುತ್ತಲಿನ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಕನಸಿದೆ~ ಎಂದರು.
ಶಿಬಿರದಲ್ಲಿ ಸುಮಾರು 100 ಜನರು ರಕ್ತದಾನ ಮಾಡಿದರು. 500 ಕ್ಕಿಂತಲೂ ಹೆಚ್ಚಿನ ಜನರು ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.