ADVERTISEMENT

ಕಾಕ್ಲಿಯರ್‌ ಇಂಪ್ಲಾಂಟ್‌: ಮಕ್ಕಳ ತರಬೇತಿಗೆ ನೂತನ ತಂತ್ರಾಂಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:54 IST
Last Updated 21 ಜನವರಿ 2018, 19:54 IST

ಬೆಂಗಳೂರು: ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಿಕೊಂಡ ಮಕ್ಕಳಿಗೆ ಶೀಘ್ರ ತರಬೇತಿ ನೀಡಲು ಅಗತ್ಯವಾದ ತಂತ್ರಾಂಶವನ್ನು ಎಸ್‌ಜಿಎಸ್‌ ವಾಗ್ದೇವಿ ಕಿವುಡು ಮಕ್ಕಳ ಶಾಲೆಯಲ್ಲಿ ಅಳವಡಿಸಲಾಗಿದ್ದು, ಅದರ ಕಾರ್ಯವಿಧಾನವನ್ನು ಪ್ರದರ್ಶಿಸಲಾಯಿತು.

ಡಾ.ಮಹಬೂಬ್‌ ಶೆಹವಾಜ್‌ ನೇತೃತ್ವದಲ್ಲಿ 20 ವೈದ್ಯರ ತಂಡ ‘ಕಾಕ್ಲಿಯರ್ ಹ್ಯಾಬಿಟೇಟರ್‌’ ಹಾಗೂ ‘ಸ್ಪೀಚ್‌ ಸ್ಟೇಷನ್‌ ಸಿಸ್ಟಂ’ ಎಂಬ ತಂತ್ರಾಂಶಗಳನ್ನು ಅಭಿವೃದ್ಧಿ‌ಪಡಿಸಿದೆ.

ವಿಶೇಷ ಶಾಲೆಗಳಲ್ಲಿ ಮಕ್ಕಳಿಗೆ ಮಾತಿನ ತರಬೇತಿ ನೀಡಲಾಗುತ್ತಿದೆ. ಭೌತಿಕವಾಗಿ ನೀಡುವ ತರಬೇತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಗು ಐದು ವರ್ಷದ ಒಳಗೆ ಮಾತು ಕಲಿಯದಿದ್ದರೆ ಅರಿವು ಮತ್ತು ಮಾತಿನ ನಡುವೆ ಅಂತರ ಹೆಚ್ಚಾಗುತ್ತದೆ ಎಂದು ಮಹಬೂಬ್‌ ವಿವರಿಸಿದರು.

ADVERTISEMENT

ಕಾಕ್ಲಿಯರ್‌ ಇಂಪ್ಲಾಂಟ್ ಆದ ಮಕ್ಕಳಿಗೆ ತರಬೇತಿ ಮುಖ್ಯವಾಗಿರುತ್ತದೆ. ಈ ಸಾಫ್ಟ್‌ವೇರ್‌ ಮೂಲಕ ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ಮಾತಿನ ಅಭ್ಯಾಸ ಮಾಡಿಸಬಹುದು. ಇದರಲ್ಲಿ ಸುಮಾರು 500 ಶಬ್ದಗಳಿವೆ. ಕಾಕ್ಲಿಯರ್‌ ಯಂತ್ರ ಹೇಗೆ ಶಬ್ದಗಳನ್ನು ಗ್ರಹಿಸುತ್ತದೆ ಎನ್ನುವುದನ್ನು ಆಧರಿಸಿ ಅದಕ್ಕೆ ತಕ್ಕಂತೆ ಶಬ್ದಗಳನ್ನು ರೂಪಿಸಿದ್ದೇವೆ ಎಂದು ಹೇಳಿದರು.

ಸಾಫ್ಟ್‌ವೇರ್‌ ಬಳಸುವ ಬಗ್ಗೆ ವಾಗ್ದೇವಿ ಶಾಲೆಯಲ್ಲಿ ಮೂರು ದಿನಗಳ ತರಬೇತಿ ನೀಡಲಾಗುತ್ತದೆ. ಈ ತಂತ್ರಾಂಶಕ್ಕೆ ₹30 ಸಾವಿರ ವೆಚ್ಚವಾಗುತ್ತದೆ.

‘ಸದ್ಯ ನಮ್ಮ ಶಾಲೆಯ ಮಕ್ಕಳು ಈ ಸಾಫ್ಟ್‌ವೇರ್‌ ಬಳಸುತ್ತಿದ್ದಾರೆ. ಕಾಕ್ಲಿಯರ್‌ ಇಂಪ್ಲಾಂಟ್‌ ಆದ ಮಕ್ಕಳು ಮತ್ತು ಪೋಷಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ’ ಎಂದು ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಕಿ ಡಾ. ಶಾಂತಾ ರಾಧಾಕೃಷ್ಣ ತಿಳಿಸಿದರು.

ಮಾಹಿತಿಗೆ: 98863 49253.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.