ADVERTISEMENT

ಪಂಚಾಯತ್ ರಾಜ್ ಇಲಾಖೆಗೆ ಮತ್ತೆ ‘ಇ-ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:35 IST
Last Updated 22 ಜನವರಿ 2018, 19:35 IST
ಎನ್. ನಾಗಾಂಬಿಕಾ ದೇವಿ
ಎನ್. ನಾಗಾಂಬಿಕಾ ದೇವಿ   

ಬೆಂಗಳೂರು: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಾಲ್ಕನೇ ಬಾರಿಗೆ ಕೇಂದ್ರ ಸರ್ಕಾರದ ‘ಇ-ಪುರಸ್ಕಾರ’ಕ್ಕೆ ಭಾಜನವಾಗಿದೆ.

ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ನಾಗಾಂಬಿಕಾ ದೇವಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜೀಬ್‌ ಕುಮಾರ್‌ ಪತ್‌ಜೋಶಿ ಪತ್ರ ಬರೆದಿದ್ದಾರೆ. 2013ರಲ್ಲಿ ಇಲಾಖೆ ದ್ವಿತೀಯ ಪ್ರಶಸ್ತಿ ಪಡೆದಿತ್ತು.

ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ತರಲು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ಇಲಾಖೆ ಪರಿಣಾಮಕಾರಿಯಾಗಿ ಬಳಸಿದೆ. ಇದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ADVERTISEMENT

ಪಂಚಾಯಿತಿಗಳಲ್ಲಿ ಇಲಾಖೆ ಅಭಿವೃದ್ಧಿಪಡಿಸಿದ ‘ಗಾಂಧಿ ಸಾಕ್ಷಿ ಕಾಯಕ’ ತಂತ್ರಾಂಶ ಅಳವಡಿಸಲಾಗಿದೆ. ಈ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡದೆ ಯಾವುದೇ ಬಿಲ್‌ ಪಾವತಿ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.