ಬೆಂಗಳೂರು: ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಗ್ರಾಹಕರಿಗೆ ಪ್ರತಿ ಭಾನುವಾರ ನೀಡುತ್ತಿದ್ದ ಉಚಿತ ಕರೆ ಸೌಲಭ್ಯ ಫೆಬ್ರುವರಿ 1ರಿಂದ ಸ್ಥಗಿತಗೊಳ್ಳಲಿದೆ.
ಗ್ರಾಹಕರು ಪ್ರತಿ ಭಾನುವಾರ ಯಾವುದೇ ಕಂಪನಿ ನೆಟ್ವರ್ಕ್ಗಳಿಗೆ ಎಷ್ಟೇ ಕರೆ ಮಾಡಿದರೂ ಅದಕ್ಕೆ ಹಣ ಪಾವತಿಸ ಬೇಕಿರಲಿಲ್ಲ. 2016ರ ಆಗಸ್ಟ್ 15ರಂದು ಪ್ರಾರಂಭಿಸಲಾಗಿದ್ದ ಈ ಸೌಲಭ್ಯವನ್ನು ಈಗ ಹಿಂಪಡೆಯಲಾಗಿದೆ ಎಂದು ಬಿಎಸ್ಎನ್ಎಲ್ನ ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.