ADVERTISEMENT

ವಿಧಾನಸೌಧ ಖಾಲಿ ಖಾಲಿ!

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 20:12 IST
Last Updated 25 ಜನವರಿ 2018, 20:12 IST
ವಿಧಾನಸೌಧ ಖಾಲಿ ಖಾಲಿ!
ವಿಧಾನಸೌಧ ಖಾಲಿ ಖಾಲಿ!   

ಬೆಂಗಳೂರು: ಬಂದ್‌ ಅನ್ನು ಸರ್ಕಾರ ಪ್ರಾಯೋಜಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದರೂ ಬೆಂಗಳೂರಿನ ಬಹುತೇಕ ಸಚಿವರು, ಅಧಿಕಾರಿಗಳು, ನೌಕರರಿಲ್ಲದೇ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಟವರ್‌ಗಳಲ್ಲಿರುವ ಕಚೇರಿಗಳಲ್ಲಿ ಶೇ 15ರಷ್ಟು ಮಾತ್ರ ಹಾಜರಾತಿ ಇತ್ತು. ವಿಧಾನಸೌಧಕ್ಕೆ ಬಂದ ಗೃಹ ಸಚಿವರೂ ಹೆಚ್ಚು ಹೊತ್ತು ಅಲ್ಲಿರಲಿಲ್ಲ. ಸತತ ನಾಲ್ಕು ದಿನಗಳ ರಜೆ ಅನುಭವಿಸಲು ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ.

‘ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬಂದ್‌ಗೆ ಪರೋಕ್ಷವಾಗಿ ಬೆಂಬಲಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂಬಂತಹ ಸುತ್ತೋಲೆಯನ್ನೇ ಹೊರಡಿಸದೆ ಇರುವುದನ್ನು ನೋಡಿದರೆ ಸರ್ಕಾರ ಬಂದ್‌ ಪರವಾಗಿರುವುದು ಸ್ಪಷ್ಟ’ ಎಂದು ಕರ್ತವ್ಯಕ್ಕೆ ಹಾಜರಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಸಾಂದರ್ಭಿಕ ರಜೆ: ಎಲ್ಲ ನೌಕರರು ಸಾಂದರ್ಭಿಕ ರಜೆ ಹಾಕಿ ಬಂದ್‌ಗೆ ಬೆಂಬಲ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸದಸ್ಯರಿಗೆ ಕರೆ ನೀಡಿತ್ತು.

ಈ ಹಿಂದೆ ಬಂದ್ ನಡೆದಾಗ ನೌಕರರು ರಜೆ ಹಾಕದೇ ಪಾಲ್ಗೊಂಡಿದ್ದರಿಂದ, ಅವರ ಒಂದು ದಿನದ ವೇತನಕ್ಕೆ ಕತ್ತರಿ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.