ADVERTISEMENT

‘ದೇಶಸೇವೆಗೆ ಸನ್ನದ್ಧರಾಗಿರಿ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:47 IST
Last Updated 26 ಜನವರಿ 2018, 19:47 IST
ಯೋಧರ ಬಗ್ಗೆ ವಿದ್ಯಾರ್ಥಿಗಳು ನಾಟಕ ಪ್ರಸ್ತುತಪಡಿಸಿದರು
ಯೋಧರ ಬಗ್ಗೆ ವಿದ್ಯಾರ್ಥಿಗಳು ನಾಟಕ ಪ್ರಸ್ತುತಪಡಿಸಿದರು   

ಬೆಂಗಳೂರು: ‘ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಿ ದೇಶಸೇವೆಗೆ ಸನ್ನದ್ಧರಾಗಬೇಕು’ ಎಂದು ಶಾಸಕ ಬಿ.ಎ.ಬಸವರಾಜ್ ಸಲಹೆ ನೀಡಿದರು.

ಕೆ.ಆರ್. ಪುರದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೈಕ್ಷಣಿಕ ಬದುಕನ್ನು ಸದುಪಯೋಗಪಡಿಸಿಕೊಂಡು ಭಾರತವನ್ನು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿಸುವತ್ತ ಹೆಜ್ಜೆ ಇಡಬೇಕು ಎಂದರು.

ADVERTISEMENT

ಕೆ.ಆರ್‌.ಪುರ ಭಾಗದ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗು ಐಟಿಐ ವಿದ್ಯಾಮಂದಿರ, ಎಸ್.ಜೆ.ಇ.ಎಸ್ ಶಾಲೆ, ಭಾರತೀಯ ವಿದ್ಯಾನಿಕೇತನ ಶಾಲೆಗಳ ವಿದ್ಯಾರ್ಥಿಗಳು ಕವಾಯತು, ಸಮರಕಲೆ ಹಾಗೂ ನೃತ್ಯ ಪ್ರದರ್ಶಿಸಿದರು.

ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯೋಧರ ಕುರಿತಾದ ನಾಟಕಗಳು ಜನಮನ ಸೆಳೆದವು. ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.