ADVERTISEMENT

ಸೌರ ವಿದ್ಯುತ್ ಉತ್ಪಾದನೆಗೆ ಸಾಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 20:33 IST
Last Updated 26 ಜನವರಿ 2018, 20:33 IST

ಬೆಂಗಳೂರು: ಸೌರ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮುಂದೆ ಬಂದಿರುವ ಓಆರ್‍ಬಿ ಎನರ್ಜಿ ಕಂಪನಿಯು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಖಾಸಗಿ ಕಂಪನಿಗಳ ಕಟ್ಟಡಗಳ ಚಾವಣಿಯಲ್ಲಿ ಈ ಉಪಕರಣಗಳನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದೆ.

ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಕಿರಣ್, ‘ಸೌರವಿದ್ಯುತ್ ಉಪಕರಣಗಳನ್ನು ಅಳವಡಿಸಿಕೊಂಡ ಪ್ರದೇಶಗಳಿಗೆ ಕಂಪನಿಗಳು ಹಾಗೂ ಕೈಗಾರಿಕೆಗಳ ಪ್ರತಿನಿಧಿಗಳನ್ನು ಕರೆದೊಯ್ದು ಅರಿವು ಮೂಡಿಸುತ್ತೇವೆ’ ಎಂದಿದ್ದಾರೆ.

ಸೌರ ವಿದ್ಯುತ್ ಉತ್ಪಾದನೆಯ ಉಪಕರಣಗಳನ್ನು ಕಂಪನಿಯೇ ಉತ್ಪಾದಿಸುತ್ತದೆ. ಪ್ರತಿ ಉಪಕರಣವು 25 ವರ್ಷಗಳವರೆಗೆ ವಿದ್ಯುತ್ ಉತ್ಪಾದಿಸಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮನೆಗಳಿಗೆ ಅಳವಡಿಕೆ: ಈ ಉಪಕರಣಗಳನ್ನು ಮನೆಗಳ ಮೇಲೆಯೂ ಅಳವಡಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡರೆ ಕಂಪನಿಯ ಪ್ರತಿನಿಧಿಗಳು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ ಉಪಕರಣಗಳನ್ನು ಅಳವಡಿಸುತ್ತಾರೆ ಎಂದು ಕಿರಣ್ ಹೇಳಿದ್ದಾರೆ.

ಸಂಪರ್ಕ: 98441 70058

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.