ADVERTISEMENT

ಚಂದ್ರಗ್ರಹಣ ನೋಡಲು ಎಲ್ಲೆಲ್ಲಿ ಅವಕಾಶ?

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಚಂದ್ರಗ್ರಹಣ ನೋಡಲು ಎಲ್ಲೆಲ್ಲಿ ಅವಕಾಶ?
ಚಂದ್ರಗ್ರಹಣ ನೋಡಲು ಎಲ್ಲೆಲ್ಲಿ ಅವಕಾಶ?   

ಬೆಂಗಳೂರು: ಆಕಾಶದಲ್ಲಿ ಇದೇ 31ರಂದು ಘಟಿಸುವ ವಿಶಿಷ್ಟ ಚಂದ್ರಗ್ರಹಣ ವೀಕ್ಷಣೆಗೆ ವಿವಿಧ ಸಂಸ್ಥೆಗಳು ನಗರದ ನಾನಾ ಕಡೆಗಳಲ್ಲಿ ಅವಕಾಶ ಕಲ್ಪಿಸಿವೆ.

ಜವಹರ್‌ಲಾಲ್‌ ನೆಹರೂ ತಾರಾಲಯ ಸಂಜೆ 6.20ರಿಂದ ರಾತ್ರಿ 8.30ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಬಹುದು.

ಸಾಮೂಹಿಕ ವೀಕ್ಷಣೆ ಎಲ್ಲೆಲ್ಲಿ: ಅತ್ತಿಗುಪ್ಪೆ ಬಸ್‌ ನಿಲ್ದಾಣ ಬಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹೊಸಹಳ್ಳಿ 9ನೇ ಮುಖ್ಯರಸ್ತೆಯ ಸರ್ಕಾರಿ ಮಾದರಿ ಶಾಲೆ, ಹನುಮಂತನಗರದ ಶಂಕರ್‌ನಾಗ್‌ ವೃತ್ತದ ಬಳಿಯ ಮೈದಾನ, ಆರ್‌.ಟಿ.ನಗರದ ಎಚ್‌ಎಂಟಿ ಮೈದಾನ, ಭಾಷ್ಯಂ ವೃತ್ತದ ಬಳಿಯ ನ್ಯೂ ಆಕ್ಸ್‌ಫರ್ಡ್‌ ಪಬ್ಲಿಕ್‌ ಶಾಲೆ, ರಾಜಾಜಿನಗರ 3ನೇ ಬ್ಲಾಕ್‌ನ ಕೆಇಬಿ ಕ್ವಾಟ್ರಸ್‌, ಮತ್ತಿಕೆರೆಯ ಜೆ.ಪಿ. ಪಾರ್ಕ್‌, ಬಸವೇಶ್ವರನಗರದ ಎಸ್‌ಬಿಐ ಆಫೀಸರ್ಸ್‌ ಅಸೋಸಿಯೇಷನ್‌ ಪಬ್ಲಿಕ್‌ ಶಾಲೆ, ಕೆಂಗೇರಿ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿಯ ಪ್ರಿಯದರ್ಶಿನಿ ವಿದ್ಯಾಕೇಂದ್ರದ ಮೈದಾನದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿಯಿಂದ ಅನುಕೂಲ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.