ADVERTISEMENT

ರಫ್ತು ನೀತಿ ಉಲ್ಲಂಘನೆ: ದಂಪತಿಗೆ 5 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:44 IST
Last Updated 30 ಜನವರಿ 2018, 19:44 IST

ಬೆಂಗಳೂರು: ಕೈಗಾರಿಕಾ ಉಪ್ಪು ಎಂದು ನಮೂದಿಸಿ ಪೊಟ್ಯಾಷಿಯಂ ಕ್ಲೋರೈಡ್‌ (ಮ್ಯೂರಿಯೇಟ್ ಆಫ್ ಪೊಟ್ಯಾಷ್) ವಿದೇಶಕ್ಕೆ ರಫ್ತು
ಮಾಡಿದ ದಂಪತಿಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹ 1.40 ಲಕ್ಷ ದಂಡ ವಿಧಿಸಿದೆ.

ನಗರದಲ್ಲಿ ಬಿಲ್ವ ಲ್ಯಾಬ್ ನಡೆಸುತ್ತಿದ್ದ ದಂಪತಿ ಎನ್.ಎ. ಜಯರಾಂ ಮತ್ತು ಎನ್‌.ಜೆ. ಶೈಲಾ ಶಿಕ್ಷೆಗೆ ಒಳಗಾದವರು.

ನಿಯಮ ಉಲ್ಲಂಘಿಸಿ ರಸಾಯನಿಕಗಳನ್ನು ರಫ್ತು ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ₹ 61.08 ಕೋಟಿ ನಷ್ಟ ಉಂಟಾಗಿತ್ತು ಎಂದು ಆರೋಪಿಸಲಾಗಿತ್ತು.

ADVERTISEMENT

ಈ ಇಬ್ಬರ ವಿರುದ್ಧ ವಂಚನೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ರಫ್ತು ನೀತಿ ಉಲ್ಲಂಘಿಸಿದ ಆರೋಪದಲ್ಲಿ ಎಎಫ್‌ಆರ್‌ ದಾಖಲಿಸಿಕೊಂಡಿದ್ದ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.